ಕರ್ನಾಟಕ

karnataka

ETV Bharat / state

ಮೃತ ವರದಿಗಾರನ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ಮಂಜೂರು ಮಾಡಿದ ಸಿಎಂ ಬಿಎಸ್​ವೈ - cm sanctions compensation to reported family

ಆರು ತಿಂಗಳ ಹಿಂದೆ ನಿಧನ ಹೊಂದಿದ ಪುತ್ತೂರಿನ ಪತ್ರಿಕೆಯೊಂದರ ವರದಿಗಾರ ದಿವಂಗತ ನಾರಾಯಣ ನಾಯ್ಕ ಅಮ್ಮುಂಜೆ ಕುಟುಂಬಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ 5 ಲಕ್ಷ ರೂ. ಪರಿಹಾರಧನ ಬಿಡುಗಡೆ ಮಾಡಿ ನೆರವಾಗಿದ್ದಾರೆ.

cm yadiyurappa sanctions Rs 5 lakh compensation to the late reporter family
5 ಲಕ್ಷ ರೂ ಪರಿಹಾರ ಮಂಜೂರು

By

Published : Jan 4, 2021, 3:03 PM IST

ಮಂಗಳೂರು/ಪುತ್ತೂರು: ಅಕಾಲಿಕವಾಗಿ ನಿಧನ ಹೊಂದಿದ ಪುತ್ತೂರಿನ ಪತ್ರಿಕೆಯೊಂದರ ವರದಿಗಾರ ದಿವಂಗತ ನಾರಾಯಣ ನಾಯ್ಕ ಅಮ್ಮುಂಜೆ ಕುಟುಂಬಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ 5 ಲಕ್ಷ ರೂ. ಪರಿಹಾರ ಮಂಜೂರು ಮಾಡಿದ್ದಾರೆ.

5 ಲಕ್ಷ ರೂ. ಪರಿಹಾರ ಮಂಜೂರು

ಪುತ್ತೂರಿನ ಪತ್ರಿಕೆಯೊಂದರಲ್ಲಿ 23 ವರ್ಷಕ್ಕೂ ಹೆಚ್ಚು ಕಾಲ ಪತ್ರಕರ್ತರಾಗಿ ದುಡಿದಿದ್ದ ನಾರಯಣ ನಾಯ್ಕ ಅಮ್ಮುಂಜೆಯವರು ಕಳೆದ ವರ್ಷ ಆಗಸ್ಟ್ 20ರಂದು ನಿಧನ ಹೊಂದಿದ್ದರು.

ಕುಟುಂಬದ ಏಕೈಕ ಅಧಾರವಾಗಿದ್ದ ನಾರಾಯಣ ನಾಯ್ಕ ಕುಟುಂಬ ತೀವ್ರ ಅರ್ಥಿಕ ಸಂಕಷ್ಟದಲ್ಲಿರುವುದನ್ನು ಮನಗಂಡು ಪುತ್ತೂರು ತಾಲೂಕು ಪತ್ರಕರ್ತರ ಸಂಘವು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಇಂದಾಜೆ ಹಾಗೂ ರಾಜ್ಯ ಸಂಘದ ಶಿವಾನಂದ ತಗಡೂರ್ ಮೂಲಕ ಮುಖ್ಯಮಂತ್ರಿಗಳ ವತಿಯಿಂದ ಪರಿಹಾರ ಕೋರಿ ಮನವಿ ಸಲ್ಲಿಸಿತ್ತು. ಹೀಗಾಗಿ ಸಂಕಷ್ಟದಲ್ಲಿ ಸಿಲುಕಿದ್ದ ಪತ್ರಕರ್ತನ ಕುಟುಂಬಕ್ಕೆ 5 ಲಕ್ಷ ರೂ. ಮಂಜೂರು ಮಾಡಿರುವ ಮುಖ್ಯಮಂತ್ರಿ ಯಡಿಯೂರಪ್ಪಗೆ ಪತ್ರಕರ್ತರ ಸಂಘಗಳು ಕೃತಜ್ಞತೆ ಸಲ್ಲಿಸಿವೆ.

5 ಲಕ್ಷ ರೂ. ಪರಿಹಾರ ಮಂಜೂರು

ಮಗನ ವಿದ್ಯಾಭ್ಯಾಸ ಹಾಗೂ ಮನೆಯ ಖರ್ಚು ನಿಭಾಯಿಸಲು ಕುಟುಂಬ ಸಂಕಷ್ಟ ಪಡುತ್ತಿರುವುದನ್ನು ಮನಗಂಡು ಪುತ್ತೂರು ತಾಲೂಕು ಪತ್ರಕರ್ತರ ಸಂಘ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಇಂದಾಜೆ ಹಾಗೂ ರಾಜ್ಯ ಸಂಘದ ಶಿವಾನಂದ ತಗಡೂರ್ ಮೂಲಕ ಮುಖ್ಯಮಂತ್ರಿಗಳ ವತಿಯಿಂದ ಪರಿಹಾರ ಕೋರಿ ಮನವಿ ಸಲ್ಲಿಸಿತ್ತು. ಅದರೆ ಇದೇ ಸಮಯದಲ್ಲಿ ಅಲ್ಲಿಯವರೆಗೆ ಪುತ್ತೂರು ತಾಲೂಕು ಪತ್ರಕರ್ತರ ಸಂಘದ ಸದಸ್ಯರಾಗಿದ್ದ ಸುದ್ದಿ ಬಿಡುಗಡೆಯ ಸದಸ್ಯರು ಪತ್ರಿಕೆಯ ಸಂಪಾದಕ /ಮಾಲೀಕರ ಪ್ರಚೋದನೆಯ ಮೇರೆಗೆ ಸಂಘವನ್ನು ಇಬ್ಭಾಗ ಮಾಡುವ ಕಾರ್ಯದಲ್ಲಿ ಮಗ್ನರಾದರು. ಎಂಟು ಮಂದಿ ಸದಸ್ಯರು ಸಂಘಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಪತ್ರಕರ್ತರ ಸಂಘದ ಹಾಗೂ ಅಲ್ಲಿನ ಸದಸ್ಯರ ತೇಜೋವಧೆ ಮಾಡುವ ವರದಿಗಳನ್ನು ಪತ್ರಿಕೆಯಲ್ಲಿ ಪ್ರಕಟಿಸಲು ಆರಂಭಿಸಲಾಗಿತ್ತು.

ಆದರೆ ಇದ್ಯಾವುದಕ್ಕೂ ಜಗ್ಗದ ಪತ್ರಕರ್ತರರ ಸಂಘ ದಿ. ನಾರಾಯಣ ನಾಯ್ಕ ಅಮ್ಮುಂಜೆರವರ ಕುಟುಂಬಕ್ಕೆ ಪರಿಹಾರ ಕೋರಿ ಮುಖ್ಯಮಂತ್ರಿಗಳಿಗೆ ಅಧಿಕೃತ ಮನವಿ ಕಳುಹಿಸಿತ್ತು. ಆ ಮನವಿಯನ್ನು ತ್ವರಿತವಾಗಿ ಪುರಸ್ಕರಿಸಿದ ಮುಖ್ಯಮಂತ್ರಿಗಳು ಐದು ಲಕ್ಷ ರೂಪಾಯಿ ಪರಿಹಾರ ನೀಡಿದ್ದಾರೆ. ದುಡಿಸಿದ ಸಂಸ್ಥೆ ಮೃತರ ಕುಟುಂಬದ ಕೈ ಬಿಟ್ಟರೂ ಗೆಳೆತನದ ಹಸ್ತ ಚಾಚಿ ಕೈ ಕುಲುಕಿದ್ದ ಸಂಘದ ಸದಸ್ಯರು ನೆರವಿಗೆ ನಿಲ್ಲುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಇದನ್ನೂ ಓದಿ:ಸ್ಯಾಂಡಲ್ ವುಡ್ ಡ್ರಗ್ ಕೇಸ್: ತುಪ್ಪದ ಬೆಡಗಿಗೆ ಹೊಸ ತಲೆನೋವು

For All Latest Updates

TAGGED:

ABOUT THE AUTHOR

...view details