ಕರ್ನಾಟಕ

karnataka

ETV Bharat / state

ಕುಕ್ಕಾವು ನೆರೆ ಹಾನಿ ಪ್ರದೇಶ ವೀಕ್ಷಣೆಗೆ ಆಗಮಿಸಿದ ಸಿಎಂ.... ಜನಪ್ರತಿನಿಧಿಗಳ ವಿಳಂಬ ಆಗಮನಕ್ಕೆ ಗ್ರಾಮಸ್ಥರ ಆಕ್ರೋಶ - mangalore latest news

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕುಕ್ಕಾವುವಿನಲ್ಲಿ ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ನೆರೆಹಾನಿ ಪರಿಶೀಲನೆ ಮಾಡುತ್ತಿದ್ದ ಸಂದರ್ಭದಲ್ಲಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕುಕ್ಕಾವು ನೆರೆ ಹಾನಿಪ್ರದೇಶ ವೀಕ್ಷಣೆಗೆ ಆಗಮಿಸಿದ ಸಿಎಂ..ಜನಪ್ರತಿನಿಧಿಗಳ ವಿಳಂಬ ಆಗಮನಕ್ಕೆ ಗ್ರಾಮಸ್ಥರ ಆಕ್ರೋಶ

By

Published : Aug 12, 2019, 5:41 PM IST

ಮಂಗಳೂರು:ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕುಕ್ಕಾವುವಿನಲ್ಲಿ ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ನೆರೆಹಾನಿ ಪರಿಶೀಲನೆ ಮಾಡುತ್ತಿದ್ದ ಸಂದರ್ಭದಲ್ಲಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕುಕ್ಕಾವು ನೆರೆ ಹಾನಿಪ್ರದೇಶ ವೀಕ್ಷಣೆಗೆ ಆಗಮಿಸಿದ ಸಿಎಂ..ಜನಪ್ರತಿನಿಧಿಗಳ ವಿಳಂಬ ಆಗಮನಕ್ಕೆ ಗ್ರಾಮಸ್ಥರ ಆಕ್ರೋಶ

ಕುಕ್ಕಾವುವಿನಲ್ಲಿ ಸೇತುವೆ ಕುಸಿದು ಬಿದ್ದ ಪ್ರದೇಶ ವೀಕ್ಷಣೆ ಮಾಡುತ್ತಿದ್ದ ಸಂದರ್ಭದಲ್ಲಿ ಹೊಳೆ ಆಚೆಯಿದ್ದ ಗ್ರಾಮಸ್ಥರು, ನಮ್ಮನ್ನು ಯಾವ ಜನಪ್ರತಿನಿಧಿಗಳು ನೋಡಲು ಈವರೆಗೂ ಬಂದಿಲ್ಲ. ಈಗ ಯಾಕೆ ಬಂದಿದ್ದೀರಿ ಎಂದು ಪ್ರಶ್ನಿಸಿದ್ರು.

ಆದರೆ, ಗ್ರಾಮಸ್ಥರ ಆಕ್ರೋಶದ ಮಾತುಗಳು ಮುಖ್ಯಮಂತ್ರಿ ಗಮನಕ್ಕೆ ಬಾರದೆ, ಅವರು ಕುಸಿದ ಸೇತುವೆ ವೀಕ್ಷಣೆ ಮಾಡಿ ತೆರಳಿದ್ದಾರೆ. ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ತೆರಳಿದ ಬಳಿಕ ಶಾಸಕ ಹರೀಶ್ ಪೂಂಜಾ ಈ ಸಂಪರ್ಕ ಸೇತುವೆ ನಿರ್ಮಿಸಿಕೊಡುವುದಾಗಿ ಭರವಸೆ ನೀಡಿದ್ದಾರೆ.

ABOUT THE AUTHOR

...view details