ಮಂಗಳೂರು: ಮಂಗಳೂರು ಪೊಲೀಸ್ ಗೋಲಿಬಾರ್ನಲ್ಲಿ ಮೃತಪಟ್ಟವರು ಅಪರಾಧಿಗಳೆಂದು ಸಾಬೀತಾದರೆ ಒಂದು ಪೈಸೆ ಪರಿಹಾರ ನೀಡುವುದಿಲ್ಲ ಎಂದು ಸಿಎಂ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.
'ಗೋಲಿಬಾರ್ನಲ್ಲಿ ಮೃತಪಟ್ಟವರು ಅಪರಾಧಿಗಳೆಂದು ಸಾಬೀತಾದರೆ ಪರಿಹಾರ ಕೊಡಲ್ಲ' - ಮಂಗಳೂರಿನಲ್ಲಿ ಬಿಎಸ್ವೈ ಹೇಳಿಕೆ
ಮಂಗಳೂರು ಪೊಲೀಸ್ ಗೋಲಿಬಾರ್ನಲ್ಲಿ ಮೃತಪಟ್ಟವರು ಅಪರಾಧಿಗಳೆಂದು ಸಾಬೀತಾದರೆ, ಒಂದು ಪೈಸೆ ಪರಿಹಾರ ನೀಡುವುದಿಲ್ಲ ಎಂದು ಸಿಎಂ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.
ನಗರದ ಸರ್ಕ್ಯೂಟ್ ಹೌಸ್ನಲ್ಲಿ ಮಾತನಾಡಿದ ಅವರು, ಗೋಲಿಬಾರ್ನಲ್ಲಿ ಮೃತಪಟ್ಟ ಇಬ್ಬರಿಗೆ ತಲಾ 10 ಲಕ್ಷ ರೂ. ಪರಿಹಾರವನ್ನು ಸರ್ಕಾರ ಘೋಷಣೆ ಮಾಡಿದೆ. ಆದರೆ ಪರಿಹಾರಧನ ಇನ್ನೂ ಕೊಟ್ಟಿಲ್ಲ. ಘಟನೆಯಲ್ಲಿ ಸಾವನ್ನಪ್ಪಿದವರು ಆರೋಪ ಪಟ್ಟಿಯಲ್ಲಿ ಇದ್ದಾರೆ. ಒಂದು ವೇಳೆ ಅವರು ಅಪರಾಧಿಗಳೆಂದು ಸಾಬೀತಾದರೆ ಒಂದು ಪೈಸೆಯೂ ಪರಿಹಾರ ಕೊಡುವುದಿಲ್ಲ ಎಂದರು.
ಮಂಗಳೂರು ಗಲಭೆ ಬಗ್ಗೆ ಅಧಿಕಾರಿಗಳ ಜೊತೆಗೆ ಮಾಹಿತಿ ಪಡೆದಿದ್ದೇನೆ. ವಾಹನದಲ್ಲಿ ಕಲ್ಲು ತಂದು ತೂರಾಟ ಮಾಡಲಾಗಿದ್ದು ಇದು ವ್ಯವಸ್ಥಿತ ಷಡ್ಯಂತ್ರವಾಗಿದೆ. ಪೊಲೀಸ್ ಠಾಣೆ ಬಳಿಯ ಶಸ್ತ್ರಾಸ್ತ್ರ ಅಂಗಡಿಗೂ ನುಗ್ಗುವ ಪ್ರಯತ್ನ ಆಗಿತ್ತು. ಈ ಬಗ್ಗೆ ಸಮಗ್ರ ತನಿಖೆ ಮಾಡುತ್ತೇವೆ ಎಂದು ತಿಳಿಸಿದರು. ಆರೋಪ ಮಾಡುವ ಕಾಂಗ್ರೆಸ್ಗೆ ಸರಿಯಾದ ಉತ್ತರವನ್ನು ಸಾಕ್ಷ್ಯಾಧಾರ ಕೊಟ್ಟಿದೆ. ಎನ್ಐಎ ತನಿಖೆಯ ಬಗ್ಗೆಯೂ ಚರ್ಚಿಸಲಾಗುತ್ತಿದೆ ಎಂದು ಹೇಳಿದ್ರು.