ಮಂಗಳೂರು:ಸುರತ್ಕಲ್ನಲ್ಲಿ ನಡೆದ ಜಲೀಲ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತ್ಯಕ್ಷದರ್ಶಿಗಳ ಮಾಹಿತಿ ಪಡೆದು ಪೊಲೀಸರು ಕ್ರಮ ಕೈಗೊಳ್ಳುತ್ತಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಪ್ರತ್ಯಕ್ಷದರ್ಶಿಗಳ ಹೇಳಿಕೆ ಪಡೆದು ವಿಚಾರಣೆ: ಮಂಗಳೂರಿನಲ್ಲಿ ಮಾತನಾಡಿದ ಅವರು, ಜಲೀಲ್ ಹತ್ಯೆ ಪ್ರಕರಣ ಸಂಬಂಧಿಸಿದಂತೆ ಪೊಲೀಸರು ಕ್ರಮ ತೆಗೆದುಕೊಳ್ಳುತ್ತಿದ್ದಾರೆ. ಪೋಸ್ಟ್ ಮಾರ್ಟಂ ನಡೆದು ಅಂತ್ಯಕ್ರಿಯೆ ಶಾಂತಯುತವಾಗಿ ನಡೆಯುತ್ತಿದೆ. ತನಿಖೆ ಪ್ರಗತಿಯಲ್ಲಿದೆ. ಘಟನೆಗೆ ಸಂಬಂಧಿಸಿದಂತೆ ಪ್ರತ್ಯಕ್ಷದರ್ಶಿಗಳ ಹೇಳಿಕೆ ಪಡೆದು ಪೊಲೀಸರು ವಿಚಾರಣೆ ನಡೆಸಲಿದ್ದಾರೆ. ವಿಚಾರಣೆ ಬಳಿಕ ಸತ್ಯಾಸತ್ಯತೆ ಹೊರಬರಲಿದೆ ಎಂದರು.
ದಕ್ಷಿಣ ಕನ್ನಡ ಉಡುಪಿ ಜಿಲ್ಲೆಯ ಜನತೆ ಉಹಾಪೋಹಗಳಿಗೆ ಕಿವಿಗೊಡಬಾರದು. ಶಾಂತಿಗೆ ಧಕ್ಕೆಯಾಗದಂತೆ ನೋಡಬೇಕು ಎಂದು ಮನವಿ ಮಾಡಿದರು. ವಿಚಾರಣೆಯನ್ನು ಪೊಲೀಸರು ಮಾಡುತ್ತಾರೆ ಬಿಟ್ಟುಬಿಡಿ. ಅವರು ನಿಷ್ಪಕ್ಷಪಾತವಾಗಿ ತನಿಖೆ ನಡೆಸಲಿದ್ದಾರೆ ಎಂದು ಭರವಸೆ ನೀಡಿದರು.
ಅಶಾಂತಿ ಸಮಾಜದಲ್ಲಿ ಇರಬಾರದು: ಮುಖ್ಯಮಂತ್ರಿಗಳು ಕ್ರಿಯೆಗೆ ಪ್ರತಿಕ್ರಿಯೆ ಎಂಬ ಹೇಳಿಕೆ ನೀಡಿದ ಬಳಿಕ ಈ ರೀತಿ ಆಗುತ್ತಿದೆ ಎಂಬ ವಿಪಕ್ಷಗಳು ಆರೋಪಿಸುತ್ತಿರುವ ಬಗ್ಗೆ ಸಿಎಂ ಪ್ರತಿಕ್ರಿಯಿಸಿದರು. ಅದು ಲವ್ ಜಿಹಾದ್ ಸಂದರ್ಭದಲ್ಲಿ ಹೇಳಿದ್ದು. ಸಮಾಜದಲ್ಲಿ ಅಶಾಂತಿ ಇರಬಾರದು. ಅಶಾಂತಿಯನ್ನು ಹತ್ತಿಕ್ಕುವಂತಹದು ಸಮಾಜ ಮತ್ತು ಸರ್ಕಾರದ ಕರ್ತವ್ಯವಾಗಿದೆ.
ಯಾರೆ ತಪ್ಪು ಮಾಡಿದರೂ ಆ್ಯಕ್ಷನ್ ರಿಯಾಕ್ಷನ್ ಪ್ರಶ್ನೆಯೆ ಇಲ್ಲ. ಇದೊಂದು ಘಟನೆಗೆ ಬೇರೆ ಒಂದು ಮಾಡಲು ಹೋದರೆ ಘಟನೆಯ ನಿಜವಾದ ಕಾರಣ ತಪ್ಪಿ ಹೋಗುತ್ತದೆ. ಇದರ ತನಿಖೆಯನ್ನು ಪೊಲೀಸರಿಗೆ ಬಿಡಿ. ಅವರು ನಿಷ್ಪಕ್ಷಪಾತವಾಗಿ ತನಿಖೆ ನಡೆಸಲಿದ್ದಾರೆ. ಇನ್ನೂ ಮುಖ್ಯಮಂತ್ರಿಗಳು ಜಿಲ್ಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಏನಾದರೂ ಅವಘಡಗಳು ನಡೆಯುತ್ತಿದೆ ಎಂಬ ಪತ್ರಕರ್ತರ ಪ್ರಶ್ನೆಗೆ ಮರುತ್ತರಿಸದೆ ತೆರಳಿದರು.
ಇದನ್ನೂ ಓದಿ:ಜಲೀಲ್ ಹತ್ಯೆ ಪ್ರಕರಣ: ಆರೋಪಿಗಳ ಪತ್ತೆಗೆ 8 ಅಧಿಕಾರಿಗಳ ತಂಡ ರಚನೆ -ಪೊಲೀಸ್ ಕಮಿಷನರ್