ಕಡಬ(ದ.ಕ):ಕಡಬದ ರಾಮಕುಂಜ ನಿವಾಸಿ ನಾರಾಯಣ ಭಟ್ ಅವರ ‘ಮೋದಿಗೆ ಮೋದಿಯೇ ಸಾಟಿ‘ ಕೃತಿಯನ್ನು ಮುಖಮಂತ್ರಿ ಬಸವರಾಜ ಬೊಮ್ಮಾಯಿ ಲೋಕಾರ್ಪಣೆ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ 71ನೇ ಜನ್ಮದಿನಾಚರಣೆಯ ಪ್ರಯುಕ್ತ ಗೌರವಾರ್ಥವಾಗಿ ಕರಾವಳಿ ಕರ್ನಾಟಕದಿಂದಲೇ ಮೊಟ್ಟಮೊದಲ ಬಾರಿಗೆ ಈ ತರಹ ಕೃತಿ ರಚಿಸಿರುವು ಕರ್ನಾಟಕಕ್ಕೆ ಹೆಮ್ಮೆಯ ವಿಷಯ ಎಂದ ಸಿಎಂ ಬೊಮ್ಮಾಯಿ ಅವರು, ಸಾಹಿತಿ ನಾರಾಯಣ ಭಟ್ ಅವರ ಕಾರ್ಯಕ್ಕೆ ಶುಭ ಹಾರೈಸಿದ್ದಾರೆ.
ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರ ಪ್ರಾಯೋಜಕತ್ವದ ಈ ಕೃತಿಗೆ ಧರ್ಮಸ್ಥಳದ ಧರ್ಮಾಧಿಕಾರಿ ಪೂಜ್ಯ ಡಾ.ವೀರೇಂದ್ರ ಹೆಗಡೆ ಅವರು ಮುನ್ನುಡಿ ಬರೆದಿದ್ದಾರೆ. ಉಡುಪಿ ಪೇಜಾವರ ಮಠದ ಮಠಾಧೀಶ ಶ್ರೀ ವಿಶ್ವಪ್ರಸನ್ನ ತೀರ್ಥರು ಬೆನ್ನುಡಿ ಬರೆದಿದ್ದಾರೆ. ಶಶಿ ಶಿವಮೊಗ್ಗ ಅವರ ಪರಿಕಲ್ಪನೆಯಲ್ಲಿ ಈ ಕೃತಿ ಮೂಡಿ ಬಂದಿದೆ.