ಬಂಟ್ವಾಳ: ಗುಡ್ಡ ಜರಿದು ಮಣ್ಣಿನಡಿ ಸಿಲುಕಿ ಸಾವನ್ನಪ್ಪಿದ ಕೇರಳದ ಮೂವರು ಕಾರ್ಮಿಕರಿಗೆ ತಲಾ 5 ಲಕ್ಷ ರೂಪಾಯಿ ಪರಿಹಾರದ ಚೆಕ್ ಅನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬಂಟ್ವಾಳದ ಪ್ರವಾಸಿ ಬಂಗ್ಲೆಯಲ್ಲಿ ಮಂಗಳವಾರ ಸಂಜೆ ಮೃತರ ಕುಟುಂಬದವರಿಗೆ ಹಸ್ತಾಂತರಿಸಿದ್ದಾರೆ. ನಿರಂತರವಾಗಿ ಸುರಿದ ಮಳೆಗೆ ಜುಲೈ 6ರಂದು ಗುಡ್ಡ ಜರಿದು ಮನೆಯ ಮೇಲೆ ಬಿದ್ದು ಕೇರಳ ಮೂಲದ ರಬ್ಬರ್ ಟ್ಯಾಪಿಂಗ್ ಕಾರ್ಮಿಕರಾದ ಬಿಜು ಪಾಲಕ್ಕಾಡ್, ಸಂತೋಷ್ ಅಲಪ್ಪುಳ ಹಾಗು ಬಾಬು ಕೊಟ್ಟಾಯಂ ಮೃತಪಟ್ಟಿದ್ದರು.
ಬಂಟ್ವಾಳ: ಗುಡ್ಡ ಜರಿದು ಮೃತಪಟ್ಟ ಕಾರ್ಮಿಕರ ಕುಟುಂಬಕ್ಕೆ ತಲಾ ₹5 ಲಕ್ಷ ಪರಿಹಾರ - about bantwal land slide incident
ಇತ್ತೀಚೆಗೆ ಗುಡ್ಡಜರಿದು ಮಣ್ಣಿನಡಿ ಸಿಲುಕಿ ಮೃತಪಟ್ಟಿದ್ದ ಕೇರಳದ ಮೂವರು ಕಾರ್ಮಿಕರ ಕುಟುಂಬದವರಿಗೆ ಸಿಎಂ ಬಸವರಾಜ ಬೊಮ್ಮಾಯಿ ಪರಿಹಾರ ವಿತರಿಸಿದರು.
ಮೃತರ ಕುಟುಂಬಗಳಿಗೆ ಸಿಎಂ ಬೊಮ್ಮಾಯಿ ಅವರಿಂದ 5 ಲಕ್ಷ ರೂ ಚೆಕ್ ವಿತರಣೆ