ಕರ್ನಾಟಕ

karnataka

ETV Bharat / state

ಪೂರ್ಣವಾಗದ ಕುಲಶೇಖರ ಗುಡ್ಡ ಕುಸಿತ ತೆರವು ಕಾರ್ಯ: ಪರ್ಯಾಯ ರೈಲ್ವೆ ಹಳಿ ನಿರ್ಮಾಣ

ಮಂಗಳೂರಿನ ಕುಲಶೇಖರದಲ್ಲಿ ಗುಡ್ಡ ಕುಸಿದ ಪರಿಣಾಮ ರೈಲು ಸಂಚಾರದಲ್ಲಿ ವ್ಯತ್ಯಯವಾಗಿದ್ದು, ದುರಸ್ತಿ ಕಾಮಗಾರಿ ಇನ್ನೂ ಪೂರ್ಣವಾಗಿಲ್ಲ. ತೆರವು ಕಾರ್ಯಾಚರಣೆ ಸಮರೋಪಾದಿಯಲ್ಲಿ‌ ನಡೆಯುತ್ತಿದೆ.

mng

By

Published : Aug 28, 2019, 7:26 PM IST

ಮಂಗಳೂರು: ಕೇರಳದಿಂದ‌ ಮುಂಬೈ ಸಂಪರ್ಕಿಸುವ ಮಂಗಳೂರಿನ ಕುಲಶೇಖರದರೈಲ್ವೆ ಹಳಿಯಲ್ಲಿ ಗುಡ್ಡ ಕುಸಿದ ಪರಿಣಾಮ ರೈಲು ಸಂಚಾರದಲ್ಲಿ ವ್ಯತ್ಯಯವಾಗಿದ್ದು, ದುರಸ್ತಿ ಕಾಮಗಾರಿ ಇನ್ನೂ ಪೂರ್ಣವಾಗಿಲ್ಲ.

ರೈಲ್ವೆ ಹಳಿಯಲ್ಲಿ ಗುಡ್ಡ ಕುಸಿದ ಪರಿಣಾಮ ತೆರವು ಕಾರ್ಯಾಚರಣೆ ಸಮರೋಪಾದಿಯಲ್ಲಿ‌ ನಡೆಯುತ್ತಿದ್ದರೂ ಗುಡ್ಡ ತೆರವು ಕಾರ್ಯ ಇನ್ನೂ ಪೂರ್ಣವಾಗಿಲ್ಲ. ಈ ಕಾರಣದಿಂದ ತಾತ್ಕಾಲಿಕವಾಗಿ 400 ಮೀಟರ್​ನ ರೈಲ್ವೆ ಹಳಿ ನಿರ್ಮಾಣ ಕಾರ್ಯ ನಡೆಯುತ್ತಿದೆ. ಈ ರೈಲ್ವೆ ಹಳಿ ಇನ್ನೆರಡು ದಿನಗಳಲ್ಲಿ ಪೂರ್ಣವಾಗಬಹುದೆಂಬ ನಿರೀಕ್ಷೆಯನ್ನಿಡಲಾಗಿದೆ.

ತೆರವು ಕಾರ್ಯಾಚರಣೆ

ಮಂಗಳೂರು ಮೂಲಕ ಮುಂಬೈ ಸಂಪರ್ಕಿಸುವ ರೈಲ್ವೆ ಹಳಿಯಲ್ಲಿ ರೈಲು ಪ್ರಯಾಣಿಸಲು ಅಸಾಧ್ಯವಾದ ಹಿನ್ನೆಲೆಯಲ್ಲಿ ಈ ಭಾಗದ ರೈಲು ಸಂಚಾರ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಕೇರಳದಿಂದ ಮುಂಬೈ ಸಂಪರ್ಕಿಸುವ ರೈಲು ಮಾರ್ಗವನ್ನು ಬದಲಾಯಿಸಲಾಗಿದೆ.

ಮಂಗಳೂರು-ಮುಂಬೈ ನಡುವೆ ದಿನಂಪ್ರತಿ ಸಾವಿರಾರು ಪ್ರಯಾಣಿಕರು ರೈಲು ಸಂಚಾರ ಮಾಡುತ್ತಿದ್ದು, ಗುಡ್ಡ ಕುಸಿತದಿಂದ ಪ್ರಯಾಣಿಕರು ಪರದಾಡುವಂತಾಗಿದೆ.

ABOUT THE AUTHOR

...view details