ಮಂಗಳೂರು(ದಕ್ಷಿಣ ಕನ್ನಡ): ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ಎಸ್‌ಕೆಡಿಆರ್‌ಡಿಪಿ) ಸರ್ಕಾರೇತರ ಸಂಸ್ಥೆಯಾಗಿದ್ದು, ಜನವರಿ 14 ರ ಮಕರ ಸಂಕ್ರಾಂತಿಯ ಮೊದಲು ರಾಜ್ಯಾದ್ಯಂತ 16,239 ಧಾರ್ಮಿಕ ಕೇಂದ್ರಗಳ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛಗೊಳಿಸಲು ಯೋಜನೆ ರೂಪಿಸಿದೆ. ಧರ್ಮಸ್ಥಳ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಮತ್ತು ಅವರ ಪತ್ನಿ ಹೇಮಾವತಿ ಹೆಗ್ಗಡೆ ಅವರು ಹಮ್ಮಿಕೊಂಡಿರುವ ಬೃಹತ್ ಸ್ವಚ್ಛತಾ ಅಭಿಯಾನದಲ್ಲಿ ಸ್ವಸಹಾಯ ಗುಂಪುಗಳು ಮತ್ತು ಇತರ ಎನ್‌ಜಿಒಗಳ ನಾಲ್ಕು ಲಕ್ಷಕ್ಕೂ ಹೆಚ್ಚು ಸ್ವಯಂಸೇವಕರು ಭಾಗವಹಿಸುವ ನಿರೀಕ್ಷೆಯಿದೆ ಎಂದು ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಎಲ್ ಎಚ್ ಮಂಜುನಾಥ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಪರಿಸರ ಪ್ರಜ್ಞೆ ಮೂಡಿಸುವ ದೃಷ್ಟಿಯಿಂದ ಕಾರ್ಯಕ್ರಮ:ಇಂತಹ ಚಟುವಟಿಕೆಗಳು ಜನರಲ್ಲಿ ಪರಿಸರ ಪ್ರಜ್ಞೆಯನ್ನು ಮೂಡಿಸುತ್ತದೆ ಎಂಬ ನಂಬಿಕೆಯೊಂದಿಗೆ ಹೆಗ್ಗಡೆಯವರು ಏಳು ವರ್ಷಗಳ ಹಿಂದೆ ಈ ಕಲ್ಪನೆಯನ್ನು ಹುಟ್ಟು ಹಾಕಿದ್ದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ವರ್ಷಕ್ಕೆ ಎರಡು ಬಾರಿ ಇಂತಹ ಬೃಹತ್ ಅಭಿಯಾನಗಳನ್ನು ನಡೆಸಿಕೊಂಡು ಬರುತ್ತಿದೆ. ದೇವಸ್ಥಾನಗಳು, ಚರ್ಚ್‌ಗಳು, ಬಸದಿಗಳು, ಮಸೀದಿಗಳು ಮತ್ತು ಇತರ ಧಾರ್ಮಿಕ ಪ್ರಾಮುಖ್ಯತೆಯ ಸ್ಥಳಗಳು ಶನಿವಾರದಿಂದ ಜನವರಿ 13 ರವರೆಗೆ ಸಾಮೂಹಿಕ ಸ್ವಚ್ಛತಾ ಚಟುವಟಿಕೆಗಳೊಂದಿಗೆ ಹೊಸ ನೋಟವನ್ನು ಪಡೆಯುತ್ತವೆ. ಇದರಲ್ಲಿ ಸ್ಥಳೀಯ ಸ್ವಯಂ ಸರ್ಕಾರಗಳ ಸದಸ್ಯರೂ ಸಹ ಭಾಗವಹಿಸುತ್ತಾರೆ ಎಂದು ಯೋಜನಾ ನಿರ್ದೇಶಕರು ಮಾಹಿತಿ ನೀಡಿದ್ದಾರೆ.
ಇದನ್ನು ಓದಿ:ಕಳ್ಳಿ ಮುಳ್ಳಿನ ಗುಡಿ ಮೇಲಿನ ಕಳಶ ಕೀಳುವ ಸಂಪ್ರದಾಯ: ಕಾಡುಗೊಲ್ಲರ ಕ್ಯಾತೆ ದೇವರ ಜಾತ್ರೆ