ಕರ್ನಾಟಕ

karnataka

ETV Bharat / state

ಮಂಗಳೂರಿನಲ್ಲಿ ಎರಡು ಗುಂಪುಗಳ ಮಧ್ಯೆ ಬೀದಿ ಕಾಳಗ: ಪೊಲೀಸರಿಂದ ಲಾಠಿ ಏಟು - ಕಾವೂರು ಇತ್ತೀಚಿನ ಸುದ್ದಿ

ಎರಡು ಭಿನ್ನ ಕೋಮಿನ ತಂಡಗಳ ನಡುವೆ ನಡು ರಸ್ತೆಯಲ್ಲಿಯೇ ಜಗಳ ನಡೆದಿದ್ದು, ಪೊಲೀಸರು ಮಧ್ಯಪ್ರವೇಶಿಸಿ ಲಾಠಿ ಪ್ರಹಾರ ನಡೆಸಿದರು. ಈ ಘಟನೆ ಕಾವೂರು ಜಂಕ್ಷನ್ ಬಳಿ‌ಯ ಕೋರ್ದಬ್ಬು ದೈವಸ್ಥಾನದ ಬಳಿ ನಡೆದಿದೆ.

Mangaluru
ಬೀದಿ ಕಾಳಗ ಚದುರಿಸಿದ ಪೊಲೀಸರು

By

Published : Aug 27, 2021, 6:49 AM IST

ಮಂಗಳೂರು: ನಗರದ ಕಾವೂರು ಜಂಕ್ಷನ್ ಬಳಿ ಎರಡು ಭಿನ್ನ ಕೋಮಿನ ತಂಡಗಳ ನಡುವೆ ನಡು ರಸ್ತೆಯಲ್ಲಿಯೇ ಜಗಳ ನಡೆದಿದ್ದು, ಪೊಲೀಸರು ಮಧ್ಯಪ್ರವೇಶಿಸಿ ಲಾಠಿ ಪ್ರಹಾರ ನಡೆಸಿ ಯುವಕರ‌ನ್ನು ಚದುರಿಸಿದ ಘಟನೆ ನಿನ್ನೆ ಸಂಜೆ ನಡೆದಿದೆ.

ಘಟನೆ ವಿವರ:ಸಂಚರಿಸುತ್ತಿದ್ದ ಸ್ಕೂಟರೊಂದಕ್ಕೆ ಹಿಂಬದಿಯಿಂದ ಬಂದ ಕಾರು ಡಿಕ್ಕಿಯಾಗಿದೆ. ಸ್ಕೂಟರಿನಲ್ಲಿದ್ದ ಹಿಂದೂ ಸಂಘಟನೆಯ ಯುವಕರು ಕಾರು ಚಾಲಕನ ಬಗ್ಗೆ ಆಕ್ಷೇಪ ತೆಗೆದಿದ್ದಾರೆ. ಈ ವಿಚಾರಕ್ಕೆ ಇತ್ತಂಡಗಳ ನಡುವೆ ವಾಗ್ವಾದ ನಡೆದಿದೆ. ಸ್ವಲ್ಪ ಸಮಯದಲ್ಲೇ ಎರಡೂ ಕಡೆಯ ಯುವಕರು ಸ್ಥಳದಲ್ಲಿ ಸೇರಿದ್ದು ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದೆ.‌

ಎರಡೂ ಗುಂಪುಗಳ ಯುವಕರು ಕೈ ಮಿಲಾಯಿಸುವ ಹಂತಕ್ಕೆ ಬಂದಾಗ, ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು ಯುವಕರ ಮೇಲೆ ಲಾಠಿ ಬೀಸಿದ್ದಾರೆ. ಲಾಠಿ ಪ್ರಹಾರವಾಗುತ್ತಲೇ ಸೇರಿದ್ದ ಯುವಕರೆಲ್ಲಾ ಓಡಿ ತಪ್ಪಿಸಿಕೊಂಡಿದ್ದಾರೆ. ಪೊಲೀಸರ ಸಕಾಲಿಕ ಕ್ರಮದಿಂದಾಗಿ ಭಿನ್ನ ಕೋಮುಗಳ ಯುವಕರ ನಡುವೆ ನಡೆಯಲಿದ್ದ ಬೀದಿ ಕಾಳಗ ತಪ್ಪಿದಂತಾಗಿದೆ.

ABOUT THE AUTHOR

...view details