ಕರ್ನಾಟಕ

karnataka

ETV Bharat / state

ಆಕ್ಷೇಪಾರ್ಹ ಪೋಸ್ಟ್ ಆರೋಪ.. ಮಂಗಳೂರು ಮುಸ್ಲಿಂ ಪೇಜ್ ಕುರಿತು ಸಿಐಡಿ ತನಿಖೆ - ಫೇಸ್​​ಬುಕ್​​ನಲ್ಲಿ ಆಕ್ಷೇಪಾರ್ಹ ಪೋಸ್ಟ್ ಮಾಡಿದ ಆರೋಪ

ಬಜರಂಗದಳ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣವೂ ಸೇರಿದಂತೆ ವಿವಾದಾತ್ಮಕ, ಆಕ್ಷೇಪಾರ್ಹ ಬರಹಗಳನ್ನು ಪೋಸ್ಟ್ ಮಾಡಿರುವ ಆರೋಪದ ಮೇಲೆ ಮಂಗಳೂರು ಮುಸ್ಲಿಂ ಫೇಸ್​​ಬುಕ್ ಖಾತೆ ಕುರಿತಾದ ತನಿಖೆಯನ್ನು ಸಿಐಡಿಗೆ ನೀಡಲಾಗಿದೆ.

CID to investigate Mangalore Muslim Facebook page
ಆಕ್ಷೇಪಾರ್ಹ ಪೋಸ್ಟ್ ಮಾಡಿರುವ ಮಂಗಳೂರು ಮುಸ್ಲಿಂ ಪೇಜ್ ಸಿಐಡಿ ತನಿಖೆಗೆ

By

Published : Mar 5, 2022, 10:27 PM IST

ಮಂಗಳೂರು: ಶಿವಮೊಗ್ಗದಲ್ಲಿ ನಡೆದ ಬಜರಂಗದಳ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣವೂ ಸೇರಿದಂತೆ ವಿವಾದಾತ್ಮಕ, ಆಕ್ಷೇಪಾರ್ಹ ಬರಹಗಳನ್ನು ಪೋಸ್ಟ್ ಮಾಡಿ ಸಮಾಜದಲ್ಲಿ ಅಶಾಂತಿ ಸೃಷ್ಟಿಸಲು ಯತ್ನಿಸಿದ್ದ ಆರೋಪದ ಮೇಲೆ ಮಂಗಳೂರು ಮುಸ್ಲಿಂ ಫೇಸ್​​ಬುಕ್ ಖಾತೆ ಕುರಿತಾದ ತನಿಖೆಯನ್ನು ಸಿಐಡಿಗೆ ಒಪ್ಪಿಸಲಾಗಿದೆ.

ಮಂಗಳೂರು ಮುಸ್ಲಿಂ ಪೇಜ್​​​​ನಲ್ಲಿ ಹತ್ಯೆಯಾದ ಹರ್ಷನ ಬಗ್ಗೆ ಆಕ್ಷೇಪಾರ್ಹ ಬರಹವನ್ನು ಪೋಸ್ಟ್ ಮಾಡಿದ್ದಲ್ಲದೆ ಸುದ್ದಿವಾಹಿನಿಯ ನಿರೂಪಕರು, ರಾಜ್ಯದ ಸಚಿವರ ಬಗ್ಗೆ ಆಕ್ಷೇಪಾರ್ಹ ಬರಹವನ್ನು ಪೋಸ್ಟ್ ಮಾಡಲಾಗಿತ್ತು ಎನ್ನಲಾಗ್ತಿದೆ. ಆದ್ದರಿಂದ ಈ ಪೋಸ್ಟ್‌ ಬಗ್ಗೆ ಮಂಗಳೂರು ಪೊಲೀಸರು ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿದ್ದರು.

ಅಲ್ಲದೆ ಈ ಫೇಸ್​ಬುಕ್​ ಖಾತೆಯನ್ನು ಬ್ಲಾಕ್ ಮಾಡಲು ಮಂಗಳೂರು ಪೊಲೀಸರು ಫೇಸ್​ಬುಕ್​ ಸಂಸ್ಥೆಗೆ ಮಾಹಿತಿ ಕೇಳಿದ್ದರು. ಇದೀಗ ಈ ಪೇಜ್ ಸಮಗ್ರ ತನಿಖೆಗೆ ಪ್ರಕರಣವನ್ನು ಸಿಐಡಿಗೆ ವಹಿಸಲಾಗಿದೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ರಾಜ್ಯದಲ್ಲಿ ನಿಯಂತ್ರಣಕ್ಕೆ ಬಂದ ಕೋವಿಡ್: ಇಂದು 278 ಹೊಸ ಸೋಂಕಿತರು ಪತ್ತೆ

ABOUT THE AUTHOR

...view details