ಮಂಗಳೂರು:ದಲಿತ ಹೋರಾಟಗಾರ ಡೀಕಯ್ಯ ಅಸಹಜ ಸಾವು ಪ್ರಕರಣವನ್ನು ರಾಜ್ಯ ಸರ್ಕಾರ ಸಿಐಡಿಗೆ ನೀಡಿ ಆದೇಶಿಸಿದೆ. ಡೀಕಯ್ಯ (63) ಅವರು 2022ರ ಜುಲೈ 9ರಂದು ಮಣಿಪಾಲ ಕೆಎಂಸಿಯಲ್ಲಿ ಮೃತರಾಗಿದ್ದರು. ದಲಿತ ಹೋರಾಟಗಾರರಾಗಿ ಗುರುತಿಸಿಕೊಂಡಿದ್ದ ಬೆಳ್ತಂಗಡಿಯ ಡೀಕಯ್ಯ, ನಿವೃತ್ತ ಬಿಎಸ್ಎನ್ಎಲ್ ಉದ್ಯೋಗಿ. ಹಲವು ಹೋರಾಟಗಳಲ್ಲಿ ಭಾಗಿಯಾಗಿದ್ದು ಮಾತ್ರವಲ್ಲದೇ ಅಂಬೇಡ್ಕರ್ ಚಿಂತನೆಯನ್ನು ಪಸರಿಸಲು ಶ್ರಮಿಸಿದ್ದರು. ಆದರೆ, ಅವರ ಸಾವಿನ ಬಗ್ಗೆ ಕುಟುಂಬವರ್ಗ ಸಂಶಯ ವ್ಯಕ್ತಪಡಿಸಿತ್ತು.
ಡೀಕಯ್ಯ ಅವರ ಪತ್ನಿ ಮತ್ತು ಪತ್ನಿಯ ಸಹೋದರಿ ಮೇಲೆ ಸಂಶಯವನ್ನು ಕುಟುಂಬವರ್ಗ ವ್ಯಕ್ತಪಡಿಸಿತ್ತು. ಅವರ ತಲೆಗೆ ಗಾಯವಾಗಿರುವುದು ಮತ್ತು ಇದು ಅಸಹಜ ಸಾವೆಂಬು ಅನುಮಾನದ ಮೇಲೆ ಕುಟುಂಬದವರು ಪೊಲೀಸರಿಗೆ ದೂರು ನೀಡಿದ್ದರು. ಆ ಬಳಿಕ ಅಂತ್ಯಕ್ರಿಯೆ ಮಾಡಲಾಗಿದ್ದ ಅವರ ಶವವನ್ನು ಬೆಳ್ತಂಗಡಿ ತಹಶೀಲ್ದಾರ್ ಸಮ್ಮುಖದಲ್ಲಿ ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಲಾಗಿತ್ತು.