ಮಂಗಳೂರು: ಹಿಂದೂಗಳಿಗೆ ವ್ರತ, ಪೂಜೆ, ಪುನಸ್ಕಾರ, ಉಪವಾಸ ಮಾಮೂಲಿ. ಆದರೆ ಮಂಗಳೂರಿನ ಕ್ರಿಶ್ಚಿಯನ್ ಯುವತಿಯೋರ್ವಳು 21 ದಿನಗಳ ಕಾಲ ಮಾಂಸಾಹಾರ ತೊರೆದು ಶುದ್ಧ ಸಸ್ಯಾಹಾರದಲ್ಲಿ ವಿದ್ಯಾಮಾತೆ ಶಾರದೆಯ ಫೋಟೊ ಶೂಟ್ ಮಾಡಿಸಿಕೊಂಡಿದ್ದಾರೆ.
ನವರಾತ್ರಿ ಹಿನ್ನೆಲೆ ಮಂಗಳೂರಿನ ಪಾತ್ ವೇ ಸಂಸ್ಥೆ ಹಾಗೂ ಮರ್ಸಿ ಲೇಡಿಸ್ ಸಲೂನ್ ಶಕ್ತಿ ದೇವತೆಗಳಾದ ನವದುರ್ಗೆಯರ ಫೋಟೊ ಶೂಟ್ ನಡೆಸಿತ್ತು. ಈ 'ಶ್ಯಾಡೋ ಆಫ್ ನವದುರ್ಗಾ' ಸರಣಿ ಫೋಟೊ ಶೂಟ್ನಲ್ಲಿ ಕುಲಶೇಖರದ ಅನೀಶಾ ಅಂಜಲಿನ್ ಮೊಂತೆರೊ ಶಾರದಾ ಮಾತೆಯ ಫೋಟೊ ಶೂಟ್ಗೆ ಆಯ್ಕೆಯಾಗಿದ್ದರು.
ವಿದ್ಯಾಮಾತೆಯ ಫೋಟೊ ಶೂಟ್ನಲ್ಲಿ ಕ್ರೈಸ್ತ ಯುವತಿ ಅನೀಶಾ ಹಿಂದೂ ದೇವತೆ ಶಾರದಾ ಮಾತೆಯ ಫೋಟೊ ಶೂಟ್ನಲ್ಲಿ ಭಾಗವಹಿಸುವುದಕ್ಕೆ 21 ದಿನಗಳ ಕಾಲ ಮಾಂಸಾಹಾರ ತೊರೆಯುತ್ತೇನೆ ಎಂದು ಅನೀಶಾ ಸಂಕಲ್ಪಿಸಿದ್ದರು. ಈ ಹಿನ್ನೆಲೆಯಲ್ಲಿ ಅವರು ಮಾಂಸಾಹಾರ ತೊರೆದು ಶುದ್ಧದಲ್ಲಿದ್ದುಕೊಂಡು ಫೋಟೊ ಶೂಟ್ನಲ್ಲಿ ಭಾಗವಹಿಸಿದ್ದಾರೆ.
ಕ್ರಿಶ್ಚಿಯನ್ ಯುವತಿಯಾಗಿರುವ ಅನೀಶಾ ಅಂಜಲಿನ್ ಮೊಂತೆರೊ ಅವರು ಶುದ್ಧಾಚರಣೆಯಲ್ಲಿ ಇದ್ದುಕೊಂಡು ಹಿಂದೂ ದೇವತೆಯ ಫೋಟೊ ಶೂಟ್ನಲ್ಲಿ ಭಾಗವಹಿಸಿರೋದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಅನೀಶಾ ಕೂಡಾ ತನಗೂ ಈ ಫೋಟೊ ಶೂಟ್ ತೃಪ್ತಿ ತಂದಿದ್ದು, ಧಾರ್ಮಿಕ ನಂಬಿಕೆಗೂ ಧಕ್ಕೆ ಬಾರದ ರೀತಿಯಲ್ಲಿ ಫೋಟೊ ಶೂಟ್ನಲ್ಲಿ ಭಾಗವಹಿಸಿರುವ ಧನ್ಯತೆ ಇದೆ ಎಂದು ಹೇಳಿದ್ದಾರೆ.