ಕರ್ನಾಟಕ

karnataka

ETV Bharat / state

ಬೆಳ್ತಂಗಡಿ ಬಿಜೆಪಿ ಕಾರ್ಯಕರ್ತರಿಂದ ಚೌಕಿದಾರ್​​​ ವೇಷ... ಮೋದಿಗೆ ಬೆಂಬಲ - ಬೆಳ್ತಂಗಡಿ

ಬಿಜೆಪಿ ಕಾರ್ಯಕರ್ತರು ಕಂದು ಬಣ್ಣದ ಪ್ಯಾಂಟ್, ಅಂಗಿ ಹಾಗೂ ಟೋಪಿ ಧರಿಸಿ ಮೋದಿಯವರ ಮೇ ಭೀ ಚೌಕಿದಾರ್ ಘೋಷಣೆಗೆ ಬೆಂಬಲ ವ್ಯಕ್ತಪಡಿಸಿದರು. ಅಲ್ಲದೆ ಅಂಗಿಯಲ್ಲಿ ಮತ್ತು ಟೋಪಿಯಲ್ಲಿ ಮೇ ಭೀ ಚೌಕಿದಾರ್ ಸ್ಲೋಗನ್ ಬರೆಯಲಾಗಿದೆ.

ಬಿಜೆಪಿ ಕಾರ್ಯಕರ್ತ

By

Published : Apr 13, 2019, 7:05 PM IST

ಮಂಗಳೂರು: ಪ್ರಧಾನಿ ಮೋದಿಯವರು ಲೋಕಸಭಾ ಚುನಾವಣಾ ಪ್ರಚಾರಕ್ಕಾಗಿ ಮಂಗಳೂರು ಭೇಟಿ ಹಿನ್ನೆಲೆಯಲ್ಲಿ ಬೆಳ್ತಂಗಡಿ ತಾಲೂಕಿನ ಬಿಜೆಪಿ ಕಾರ್ಯಕರ್ತರು ಚೌಕಿದಾರ್ ವೇಷ ಹಾಕಿ ಎಲ್ಲರ ಗಮನ ಸೆಳೆದರು.

ಕಂದು ಬಣ್ಣದ ಪ್ಯಾಂಟ್, ಅಂಗಿ ಹಾಗೂ ಟೋಪಿ ಧರಿಸಿ ಮೋದಿಯವರ ಮೇ ಭೀ ಚೌಕಿದಾರ್ ಘೋಷಣೆಗೆ ಬೆಂಬಲ ವ್ಯಕ್ತಪಡಿಸಿದರು. ಅಲ್ಲದೆ ಅಂಗಿಯಲ್ಲಿ ಮತ್ತು ಟೋಪಿಯಲ್ಲಿ ಮೇ ಭೀ ಚೌಕಿದಾರ್ ಸ್ಲೋಗನ್ ಬರೆಯಲಾಗಿತ್ತು.

ಬೆಳ್ತಂಗಡಿ ಬಿಜೆಪಿ ಕಾರ್ಯಕರ್ತರಿಂದ ಚೌಕೀದಾರ್ ವೇಷ

ಈ ಸಂದರ್ಭದಲ್ಲಿ ಚೌಕಿದಾರ್ ಕಾರ್ಯಕರ್ತ ರಾಘವೇಂದ್ರ ಕಲ್ಮಂಜ ಮಾತನಾಡಿ, ಮೋದಿಯವರು ಈವರೆಗೆ ಮಾಡಿದ ಸಾಧನೆ, ಕಾರ್ಯಕ್ರಮಗಳು ಹಾಗೂ ಅಂತಾರಾಷ್ಟ್ರಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಹಿನ್ನೆಲೆಯಲ್ಲಿ ಮತ್ತೊಮ್ಮೆ ಮೋದಿ ಪ್ರಧಾನಿಯಾಗಬೇಕು. ಅಲ್ಲದೆ ದೇಶ ಸದೃಢ ಆಗಬೇಕು. ದೇಶ ಸಮೃದ್ಧಿ ಆಗಬೇಕು ಎಂಬ ಉದ್ದೇಶವಿರಿಸಿಕೊಂಡು ಈ ಚೌಕಿದಾರ್ ವೇಷ ಧರಿಸಿದ್ದೇವೆ ಎಂದು ಹೇಳಿದರು.

ಚೌಕಿದಾರ್ ಒಂದು ಸಣ್ಣ ಅಂಗ. ಆದರೆ ಅದೇ ಅಂಗಕ್ಕೆ ಬಲ ಕೊಡುವ ಪ್ರಯತ್ನವನ್ನು‌ ನರೇಂದ್ರ ಮೋದಿಯವರು ಮಾಡುತ್ತಿದ್ದಾರೆ. ಅದಕ್ಕೋಸ್ಕರ ಅವರ ದೇಶ ಕಟ್ಟುವ ಪ್ರಯತ್ನಕ್ಕೆ ಸಣ್ಣ ಬೆಂಬಲ ನೀಡುತ್ತಿದ್ದೇವೆ. ನಾವು ಈ ಚೌಕಿದಾರರ ವೇಷ ಧರಿಸಿ ಸುಮಾರು 900-1000 ಮಂದಿ ಇಲ್ಲಿಗೆ ಬಂದಿದ್ದೇವೆ ಎಂದು ಹೇಳಿದರು.

ABOUT THE AUTHOR

...view details