ಮಂಗಳೂರು: ಬೆಂಗಳೂರಿನ ಒಂದೇ ಅಪಾರ್ಟ್ಮೆಂಟ್ನ ಮೂವರು ಮಕ್ಕಳು ಸೇರಿದಂತೆ ಓರ್ವ ಕಾಲೇಜು ಯುವತಿ ಮಂಗಳೂರಿನ ಕೆಎಂಸಿ ಆಸ್ಪತ್ರೆ ಬಳಿ ಪತ್ತೆಯಾಗಿದ್ದಾರೆ.
ಸೋಲದೇವನಹಳ್ಳಿ ಪೊಲೀಸ್ ಠಾಣೆಯ ಎಜಿಬಿ ಲೇಔಟ್ನ ಕ್ರಿಸ್ಟಲ್ ಅಪಾರ್ಟ್ಮೆಂಟ್ ನಿವಾಸಿ ಅಮೃತವರ್ಷಿಣಿ (21), ರಾಯನ್ ಸಿದ್ಧಾಂತ (12), ಭೂಮಿ (12) ಮತ್ತು ಚಿಂತನ್ (12) ಕಂಡುಬಂದಿದ್ದಾರೆ.
ಕ್ರೀಡೆಯಲ್ಲಿ ಸಾಧನೆ ಮಾಡಬೇಕು ಎಂದು ಪತ್ರ ಬರೆದು ಯುವತಿ ಸೇರಿ ಏಳು ಮಕ್ಕಳು ಮನೆ ಬಿಟ್ಟು ಹೋಗಿದ್ದರು. ಈ ಹಿನ್ನೆಲೆಯಲ್ಲಿ ಪೋಷಕರು ನೀಡಿದ ದೂರಿನ ಮೇರೆಗೆ ಬಾಗಲಗುಂಟೆ ಹಾಗೂ ಸೋಲದೇವನಹಳ್ಳಿ ಪೊಲೀಸ್ ಠಾಣೆಗಳಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿತ್ತು. ಇದೀಗ ನಾಲ್ವರನ್ನೂ ಮಂಗಳೂರಿನ ಪಾಂಡೇಶ್ವರ ಠಾಣಾ ಪೊಲೀಸರು ರಕ್ಷಿಸಿದ್ದಾರೆ. ಈ ಕುರಿತ ಹೆಚ್ಚುವರಿ ತನಿಖೆ ನಡೆಯುತ್ತಿದೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಮಕ್ಕಳು ನಾಪತ್ತೆ ಪ್ರಕರಣ: ಮೂವರು ಮಕ್ಕಳ ಪತ್ತೆ, ಉಳಿದವರಿಗೆ ಶೋಧ