ಕರ್ನಾಟಕ

karnataka

ETV Bharat / state

ಮಗುವಿನ ಅಶ್ಲೀಲ ವಿಡಿಯೋ ವೈರಲ್ ಮಾಡಿದ್ದ ಇಬ್ಬರ ವಿರುದ್ಧ ಪ್ರಕರಣ ದಾಖಲು - ಮಗುವಿನ ಅಶ್ಲೀಲ ವೀಡಿಯೋ ಸಾಮಾಜಿಕ ಜಾಲತಾಣ

ಆರೋಪಿಗಳಾದ ಅಶಿ ಹೈದರ್ ಹಾಗೂ ಇಲ್ಯಾಸ್ ಮಗುವಿನ ಅಶ್ಲೀಲ ವಿಡಿಯೋವನ್ನು ಡೌನ್ ಲೋಡ್ ಮಾಡಿಕೊಂಡು ಫೇಸ್ ಬುಕ್ ಮೆಸೆಂಜರ್‌ನಲ್ಲಿ ಚಾಟ್ ಮಾಡಿ, ಅಪ್ ಲೋಡ್ ಮಾಡಿದ್ದರು ಎಂದು ಸೈಬರ್ ಟಿಪ್ ಲೈನ್ ಮುಖಾಂತರ ಮಂಗಳೂರು ಸೈಬರ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

Child porn video goes viral on social networking
ಮಗುವಿನ ಅಶ್ಲೀಲ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್

By

Published : Jul 12, 2021, 10:47 PM IST

ಮಂಗಳೂರು:ಮಗುವಿನ ಅಶ್ಲೀಲ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿರುವ ಆರೋಪದ ಮೇಲೆ ಇಬ್ಬರ ವಿರುದ್ಧ ಮಂಗಳೂರು ಸೈಬರ್ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಅಶಿ ಹೈದರ್ ಹಾಗೂ ಇಲ್ಯಾಸ್ ಎಂಬವರ ವಿರುದ್ಧ ಪ್ರಕರಣ ದಾಖಲಾಗಿದೆ. ಆರೋಪಿಗಳಾದ ಅಶಿ ಹೈದರ್ ಹಾಗೂ ಇಲ್ಯಾಸ್ ಮಗುವಿನ ಅಶ್ಲೀಲ ವೀಡಿಯೋವನ್ನು ಡೌನ್ ಲೋಡ್ ಮಾಡಿಕೊಂಡು ಫೇಸ್ ಬುಕ್ ಮೆಸೆಂಜರ್‌ನಲ್ಲಿ ಚಾಟ್ ಮಾಡಿ, ಅಪ್‌ಲೋಡ್ ಮಾಡಿದ್ದರು ಎಂದು ಸೈಬರ್ ಟಿಪ್ ಲೈನ್ ಮುಖಾಂತರ ಮಂಗಳೂರು ಸೈಬರ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಈ ದೂರಿನ ಬಗ್ಗೆ ಪ್ರಾಥಮಿಕ ತನಿಖೆ ನಡೆಸಿರುವ ಪೊಲೀಸರು, ಆರೋಪ ದೃಢಪಡಿಸಿಕೊಂಡು ಆರೋಪಿಗಳ ವಿರುದ್ಧ ಕಲಂ 67(ಬಿ) ಐಟಿ ಕಾಯ್ದೆ ರಂತೆ ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿದ್ದಾರೆ. ಇದೀಗ ಮಂಗಳೂರು ಸೈಬರ್ ಪೊಲೀಸರು ಪ್ರಕರಣವನ್ನು ನ್ಯಾಯಾಲಯದಲ್ಲಿ ನಿವೇದಿಸಿದ್ದಾರೆ.

ಇದನ್ನೂ ಓದಿ : '1 ನೋಟು ಕೊಟ್ರೆ 3 ಕೊಡ್ತೀವಿ.. ದ್ರಾವಣ ಹಾಕಿ ಹಣ ದ್ವಿಗುಣ ಮಾಡ್ತೀವಿ..' ಸೆರೆ ಸಿಕ್ಕರು ಡಬ್ಲಿಂಗ್ ವಂಚಕರು!

ABOUT THE AUTHOR

...view details