ಸುಳ್ಯ : ನದಿ ನೀರಿನಲ್ಲಿ ಮುಳುಗಿ ಆರು ವರ್ಷದ ಬಾಲಕ ಮೃತಪಟ್ಟಿರುವ ದಾರುಣ ಘಟನೆ ಪೈಚಾರು ದೊಡೇರಿ ಬಳಿ ಸಂಭವಿಸಿದೆ. ಕುಪ್ಪರಾ (6) ಮೃತ ಬಾಲಕ. ಮೂಲತಃ ಆಂಧ್ರ ಪ್ರದೇಶದ ನಿವಾಸಿಗಳಾದ ಬಾಲಕನ ಕುಟುಂಬಸ್ಥರು, ಪೈಚಾರು ಬಳಿ ಬುಟ್ಟಿ ಹೆಣೆಯುವ ಕೆಲಸ ಮಾಡುತ್ತಿದ್ದು, ಅಲ್ಲೇ ಪರಿಸರದಲ್ಲಿ ಟೆಂಟ್ ಹಾಕಿ ವಾಸಿಸುತ್ತಿದ್ದರು.
ನದಿಗೆ ಸ್ನಾನ ಮಾಡಲೆಂದು ಕುಟುಂಬದ ಹಿರಿಯರು ಮತ್ತು ಮಕ್ಕಳು ಹೋಗಿದ್ದು, ಈ ಸಮಯದಲ್ಲಿ ನದಿ ನೀರಿನಲ್ಲಿ ಬಾಲಕ ಆಟವಾಡುತ್ತಾ ಸ್ನಾನ ಮಾಡುತ್ತಿದ್ದ. ಏಕಾಏಕಿ ಬಾಲಕ ಕಾಣೆಯಾಗಿದ್ದನ್ನು ಗಮನಿಸಿದ ಆತನ ಪೋಷಕರು ನದಿ ತೀರದಲ್ಲಿ ಕಿರುಚಾಡಿದ್ದಾರೆ.