ಮಂಗಳೂರು: ನಗರದ ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಪಂಚಮಹಲ್ ರಸ್ತೆಯಲ್ಲಿರುವ ಅರುಣಾ ಜ್ಯುವೆಲ್ಲರಿಯಲ್ಲಿ ಒಡವೆ ಖರೀದಿಸಿ ನೀಡಿರುವ 4.13 ಲಕ್ಷ ರೂ.ನ ಚೆಕ್ ಬೌನ್ಸ್ ಆಗಿದ್ದು, ಬಳಿಕ ಹಣ ಕೊಡದೆ ವಂಚನೆಗೈಯಲಾಗಿದೆ ಎಂಬ ಕಾರಣಕ್ಕೆ ನಾಲ್ವರು ಆರೋಪಿಗಳ ಮೇಲೆ ದೂರು ದಾಖಲಾಗಿದೆ.
ಒಡವೆ ಖರೀದಿಸಿ 4.13 ಲಕ್ಷ ರೂ. ಚೆಕ್ ಬೌನ್ಸ್ ಮಾಡಿ ವಂಚನೆ: ದೂರು ದಾಖಲು - ಹರೀಶ್ ಜೆ ಆಚಾರ್ಯ
ಆರೋಪಿ ಫಾತಿಮಾ ಶರೀಫ್ ಎಂಬಾಕೆ ಅರುಣಾ ಜ್ಯುವೆಲ್ಲರಿ ಮಾಲಕ ಹರೀಶ್ ಜೆ. ಆಚಾರ್ಯ ಅವರಿಗೆ ದೂರವಾಣಿ ಕರೆ ಮಾಡಿ ಸಾಲದ ರೂಪದಲ್ಲಿ ಚಿನ್ನ ಬೇಕು, ಅದಕ್ಕೆ ಮುಂದಿನ ದಿನಾಂಕದ ಚೆಕ್ ನೀಡುವುದಾಗಿ ಹೇಳಿದ್ದಾರೆ. ಅದರಂತೆ ಚಿನ್ನ ನೀಡಲಾಗಿತ್ತು. ಆದರೆ ಅವರು ನೀಡಿರುವ ಚೆಕ್ ಬೌನ್ಸ್ ಆಗಿತ್ತು.
ಫಾತಿಮಾ ಶರೀಫ್, ರಮೀಝ್ ರಾಝ್, ಅಕ್ಬರ್, ಝೀನತ್ ಮೇಲೆ ದೂರು ದಾಖಲಾಗಿದೆ. ಪ್ರಕರಣದ ಮೊದಲ ಆರೋಪಿ ಫಾತಿಮಾ ಶರೀಫ್ ಎಂಬಾಕೆ ಅರುಣಾ ಜ್ಯುವೆಲ್ಲರಿ ಮಾಲಕ ಹರೀಶ್ ಜೆ. ಆಚಾರ್ಯ ಅವರಿಗೆ ದೂರವಾಣಿ ಕರೆ ಮಾಡಿ ಸಾಲದ ರೂಪದಲ್ಲಿ ಚಿನ್ನ ಬೇಕು, ಅದಕ್ಕೆ ಮುಂದಿನ ದಿನಾಂಕದ ಚೆಕ್ ನೀಡುವುದಾಗಿ ಹೇಳಿದ್ದಾರೆ.
ಅದರಂತೆ ಚಿನ್ನ ನೀಡಲಾಗಿತ್ತು. ಆದರೆ ಅವರು ನೀಡಿರುವ ಚೆಕ್ ಬೌನ್ಸ್ ಆಗಿತ್ತು. ಈ ಬಗ್ಗೆ ಆರೋಪಿಗಳಿಗೆ ತಿಳಿಸಿದಾಗ ತಾವು ವಾರದೊಳಗೆ ಕೊಡುವುದಾಗಿ ತಿಳಿಸಿದ್ದಾರೆ. ಆದರೆ ಹಣ ಕೊಡದೆ ಮೋಸ ಮಾಡಿದ್ದರಿಂದ ಮುಲ್ಕಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಓದಿ:ಹಾವೇರಿಯಲ್ಲಿ ಮಟ್ಕಾ ಅಡ್ಡೆ ಮೇಲೆ ಪೊಲೀಸರ ದಾಳಿ: 23 ಮಂದಿ ಬಂಧನ