ಬಂಟ್ವಾಳ: ತಾಲೂಕಿನ ಸಜೀಪಮೂಡ, ಸಜೀಪಮುನ್ನೂರು ಗ್ರಾಮಗಳಲ್ಲಿ ರಾಜಕೀಯ ಪಕ್ಷವೊಂದರ ಕಾರ್ಯಕರ್ತರು ರಾಸಾಯನಿಕ ಸಿಂಪಡಣೆ ನಡೆಸಿದ ವಿಚಾರವೀಗ ಇತರೆ ಸಂಘಟನೆಗಳ ಆಕ್ಷೇಪಕ್ಕೆ ಕಾರಣವಾಗಿದೆ.
ಪಿಡಿಒ ಗಮನಕ್ಕೆ ತರದೆ ಎಸ್.ಡಿ.ಪಿ.ಐ ಕಾರ್ಯಕರ್ತರಿಂದ ರಾಸಾಯನಿಕ ಸಿಂಪಡಣೆ: ಪೊಲೀಸರಿಗೆ ದೂರು - Chemical spraying
ಕೊರೊನಾ ಹಿನ್ನೆಲೆಯಲ್ಲಿ ಎಸ್.ಡಿ.ಪಿ.ಐ. ನ ಕಾರ್ಯಕರ್ತರು ರಾಸಾಯನಿಕ ದ್ರಾವಣವನ್ನು ತಾಲೂಕಿನ ಕೆಲವು ಗ್ರಾಮಗಳಿಗೆ ಸಿಂಪಡಣೆ ಮಾಡಿದ್ದು, ಈ ಘಟನೆಯೀಗ ಇತರೆ ಸಂಘಟನೆ, ರಾಜಕೀಯ ಪಕ್ಷಗಳ ಕಾರ್ಯಕರ್ತರ ಆಕ್ಷೇಪಕ್ಕೆ ಕಾರಣವಾಗಿದೆ.
![ಪಿಡಿಒ ಗಮನಕ್ಕೆ ತರದೆ ಎಸ್.ಡಿ.ಪಿ.ಐ ಕಾರ್ಯಕರ್ತರಿಂದ ರಾಸಾಯನಿಕ ಸಿಂಪಡಣೆ: ಪೊಲೀಸರಿಗೆ ದೂರು ಎಸ್.ಡಿ.ಪಿ.ಐ ಕಾರ್ಯಕರ್ತರಿಂದ ರಾಸಾಯನಿಕ ಸಿಂಪಡಣೆ](https://etvbharatimages.akamaized.net/etvbharat/prod-images/768-512-6797839-354-6797839-1586927926310.jpg)
ಎಸ್.ಡಿ.ಪಿ.ಐ ಕಾರ್ಯಕರ್ತರಿಂದ ರಾಸಾಯನಿಕ ಸಿಂಪಡಣೆ
ಕೊರೊನಾ ಹಿನ್ನೆಲೆಯಲ್ಲಿ ಎಸ್.ಡಿ.ಪಿ.ಐ. ನ ಕಾರ್ಯಕರ್ತರು ರಾಸಾಯನಿಕ ದ್ರಾವಣವನ್ನು ತಾಲೂಕಿನ ಕೆಲವು ಗ್ರಾಮಗಳಿಗೆ ಸಿಂಪಡಣೆ ಮಾಡಿದ್ದು, ಈ ಘಟನೆಯೀಗ ಇತರೆ ಸಂಘಟನೆ, ರಾಜಕೀಯ ಪಕ್ಷಗಳ ಕಾರ್ಯಕರ್ತರ ಆಕ್ಷೇಪಕ್ಕೆ ಕಾರಣವಾಗಿದೆ.
ಈ ಕುರಿತು ಬಂಟ್ವಾಳ ಶಾಸಕರಿಗೂ ದೂರು ನೀಡಲಾಗಿದ್ದು, ಘಟನಾ ಸ್ಥಳಕ್ಕೆ ತಹಸೀಲ್ದಾರ್, ಬಂಟ್ವಾಳ ಪೊಲೀಸರು ಭೇಟಿ ನೀಡಿದರು. ರಾತ್ರಿ ವೇಳೆಗೆ ಸ್ಥಳೀಯ ಪಿಡಿಒ ಸಿಂಡಪಣೆ ನಡೆಸಿದವರ ವಿರುದ್ಧ ದೂರು ನೀಡಿದ್ದು, ಇದು ತನ್ನ ಗಮನಕ್ಕೆ ಬಾರದೆ ಮಾಡಿದ್ದಾಗಿದೆ ಎಂದು ತಿಳಿಸಿದ್ದಾರೆ. ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.