ಮಂಗಳೂರು :ಹೊಂಚು ಹಾಕಿ ಸಂಚು ರೂಪಿಸಿ ಸಾಕು ನಾಯಿಯ ಮೇಲೆ ಚಿರತೆಯೊಂದು ದಾಳಿ ನಡೆಸಿದ ಘಟನೆ ನಗರದ ಎಕ್ಕಾರು ಮುಗೇರಬೆಟ್ಟು ಬೇಡೆ ಎಂಬಲ್ಲಿ ನಡೆದಿದೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ವೈರಲ್ ಆಗುತ್ತಿದೆ.
ಎಕ್ಕಾರಿನ ಬೇಡೆ ನಿವಾಸಿ ಸುಮತಿ ಎಂಬುವರ ಮಕ್ಕಳು ತಮ್ಮ ನಾಯಿಗಳೊಂದಿಗೆ ಮನೆಯ ಹತ್ತಿರದಲ್ಲಿಯೇ ಇದ್ದ ಕುರುಚಲು ಪೊದೆಯ ಗುಡ್ಡ ಪ್ರದೇಶಕ್ಕೆ ತೆರಳಿದ್ದರು. ಈ ಸಂದರ್ಭ ಬೇಟೆಗೆ ಹೊಂಚು ಹಾಕಿ ಕುಳಿತಿದ್ದ ಚಿರತೆ ಓಡಿ ಬಂದು ಮಕ್ಕಳ ಪಕ್ಕದಲ್ಲಿಯೇ ಇದ್ದ ನಾಯಿಗಳ ಮೇಲೆ ಎರಗಿದೆ. ಒಂದು ನಾಯಿಯನ್ನು ಬೇಟೆಯಾಡಿ ಬಾಯಿಯಲ್ಲಿ ಕಚ್ಚಿಕೊಂಡು ಓಡಲು ಯತ್ನಿಸಿದೆ.