ಮಂಗಳೂರು:ರಕ್ಷಿತ್ ಶೆಟ್ಟಿ ಅಭಿನಯದ'ಚಾರ್ಲಿ 777' ಸಿನಿಮಾದ ಪ್ರಭಾವದಿಂದಾಗಿ ನಗರ ಪೊಲೀಸ್ ಕಮೀಷನರ್ ಕಚೇರಿಯ ಆವರಣದಲ್ಲಿರುವ ಸಿಎಆರ್ ವಿಭಾಗದ ಪೊಲೀಸ್ ಶ್ವಾನಕ್ಕೆ ಚಾರ್ಲಿ ಎಂಬ ಹೆಸರಿಡಲಾಗಿದೆ.
ಮಂಗಳೂರು: ಪೊಲೀಸ್ ಶ್ವಾನಕ್ಕೆ 'ಚಾರ್ಲಿ' ನಾಮಕರಣ
ಮಂಗಳೂರಿನಲ್ಲಿ ನಿನ್ನೆ 'ಚಾರ್ಲಿ 777' ಪ್ರೀಮಿಯರ್ ಶೋ ನಡೆದಿದ್ದು, ಪೊಲೀಸ್ ಅಧಿಕಾರಿಗಳು ಸಿನಿಮಾ ವೀಕ್ಷಿಸಿದ್ದರು. ಇಂದು ಇಲಾಖೆಗೆ ಹೊಸತಾಗಿ ಸೇರಿರುವ ಶ್ವಾನಕ್ಕೆ 'ಚಾರ್ಲಿ' ಎಂದು ನಾಮಕರಣ ಮಾಡಿದ್ದಾರೆ.
ಲ್ಯಾಬ್ರೊಡರ್ ರಿಟ್ರಿವರ್ ಜಾತಿಯ ಶ್ವಾನ ಕಳೆದ ಮಾರ್ಚ್ 16ರಂದು ಜನಿಸಿದೆ. ಈ ಶ್ವಾನಕ್ಕೀಗ 3 ತಿಂಗಳು ತುಂಬಿದೆ. ಸರ್ಕಾರದ ನಿಯಮಾವಳಿಯಂತೆ ಶ್ವಾನವನ್ನು 20 ಸಾವಿರ ರೂ.ಗೆ ಬಂಟ್ವಾಳದ ವ್ಯಕ್ತಿಯೊಬ್ಬರಿಂದ ಖರೀದಿಸಲಾಗಿತ್ತು. ಈ ನಾಯಿಯನ್ನು ಬಾಂಬ್ ಪತ್ತೆ ಮತ್ತು ನಿಷ್ಕ್ರೀಯಕ್ಕೆ ತರಬೇತುಗೊಳಿಸಲು ನಿರ್ಧರಿಸಲಾಗಿದೆ. ಮೂರ್ನಾಲ್ಕು ತಿಂಗಳ ಬಳಿಕ ಆರು ತಿಂಗಳ ತರಭೇತಿಗೆ ಬೆಂಗಳೂರಿಗೆ ಕಳುಹಿಸಲಾಗುತ್ತದೆ. ಅದಾದ ಬಳಿಕ ಚಾರ್ಲಿಯನ್ನು ಕರ್ತವ್ಯಕ್ಕೆ ನಿಯೋಜಿಸಲಾಗುತ್ತದೆ.
ಇದನ್ನೂ ಓದಿ:ಶ್ರೀನಿವಾಸ್ ಗೌಡನಿಗೆ ಮಾನ ಮರ್ಯಾದೆ ಇದ್ದರೆ ರಿಸೈನ್ ಮಾಡಿ ರಾಜಕಾರಣ ಮಾಡಲಿ: ಹೆಚ್ಡಿಕೆ ವಾಗ್ದಾಳಿ