ಉಪ್ಪಿನಂಗಡಿ:ಇಲ್ಲಿನ ಮೆಸ್ಕಾಂ ಕಚೇರಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿದ್ದ ವ್ಯಕ್ತಿ ಮೇಲೆ ಹಲ್ಲೆ ನಡೆಸಿದ ಘಟನೆ ಮಂಗಳವಾರ ನಡೆದಿದೆ.
ಪಟ್ಟಣದ ಆಲಂಕಾರು ಕಕ್ವೆ ನಿವಾಸಿ ಶಿವಣ್ಣ ಗೌಡ ಎಂಬುವವರು ಹಲ್ಲೆಗೆ ಒಳಗಾದವರು.
ಉಪ್ಪಿನಂಗಡಿ:ಇಲ್ಲಿನ ಮೆಸ್ಕಾಂ ಕಚೇರಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿದ್ದ ವ್ಯಕ್ತಿ ಮೇಲೆ ಹಲ್ಲೆ ನಡೆಸಿದ ಘಟನೆ ಮಂಗಳವಾರ ನಡೆದಿದೆ.
ಪಟ್ಟಣದ ಆಲಂಕಾರು ಕಕ್ವೆ ನಿವಾಸಿ ಶಿವಣ್ಣ ಗೌಡ ಎಂಬುವವರು ಹಲ್ಲೆಗೆ ಒಳಗಾದವರು.
ವಿದ್ಯುತ್ ಬಿಲ್ ಹೆಚ್ಚಿಗೆ ಮಾಡಿದ್ದೀರಿ ಎಂದು ಆರೋಪಿಸಿ ಹಮೀದ್ ಮತ್ತು ಆತನ ಪತ್ನಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
ಈ ಕುರಿತು ಕಡಬ ಪೊಲೀಸ್ ಠಾಣೆಗೆ ಶಿವಣ್ಣ ಗೌಡ ದೂರು ನೀಡಿದ್ದಾರೆ. ಈಗಾಗಲೇ ಮೂರು ಬಾರಿ ವಿದ್ಯುತ್ ಬಿಲ್ ವಿಚಾರವಾಗಿ ಹಮೀದ್ ಹಾಗೂ ಶಿವಣ್ಣ ಗೌಡರ ನಡುವೆ ಜಗಳ ನಡೆದಿದೆ.