ಕರ್ನಾಟಕ

karnataka

ETV Bharat / state

ಗಡಿನಾಡ ಕನ್ನಡಿಗರಿಗಿಂದು ಸಿಇಟಿ ಕನ್ನಡ ಪರೀಕ್ಷೆ: 101 ವಿದ್ಯಾರ್ಥಿಗಳು ಗೈರು - ಕಾಸರಗೋಡು ವಿದ್ಯಾರ್ಥಿಗಳಿಗೆ ಮಂಗಳೂರಿನಲ್ಲಿ ಪರೀಕ್ಷೆ

ಮಂಗಳೂರಲ್ಲಿ ಇಂದು ಗಡಿನಾಡ ಕನ್ನಡಿಗರಿಗೆ ಕನ್ನಡ ಪರೀಕ್ಷೆ ನಡೆಯಿತು. ಗಡಿಜಿಲ್ಲೆಯಾದ ಕಾಸರಗೋಡು ವಿದ್ಯಾರ್ಥಿಗಳಿಗೆ ಮಂಗಳೂರಿನಲ್ಲಿ ಪರೀಕ್ಷೆ ಆಯೋಜಿಸಲಾಗಿತ್ತು.

Mangalore
Mangalore

By

Published : Aug 1, 2020, 3:34 PM IST

ಮಂಗಳೂರು:‌ಎರಡು ದಿನಗಳ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಮುಕ್ತಾಯಗೊಂಡ ಬಳಿಕ ಇಂದು ಗಡಿನಾಡ ಕನ್ನಡಿಗರಿಗೆ ಕನ್ನಡ ಪರೀಕ್ಷೆ ನಡೆಯಿತು.
ಪರೀಕ್ಷೆ ಬರೆಯುವ ಗಡಿನಾಡ ಕನ್ನಡಿಗರು ಗಡಿನಾಡ, ಹೊರನಾಡ ಕೋಟದಲ್ಲಿ ಆಯ್ಕೆಯಾಗಲು ಕನ್ನಡ ಪರೀಕ್ಷೆ ಬರೆಯುವುದು ಕಡ್ಡಾಯವಾಗಿದೆ. ಪ್ರತಿವರ್ಷ ಈ ಪರೀಕ್ಷೆ ಬೆಂಗಳೂರಿನಲ್ಲಿ ಮಾತ್ರ ನಡೆಯುತ್ತಿತ್ತು. ಈ ಬಾರಿ ಕೊರೊನಾದಿಂದ ಕರ್ನಾಟಕ-ಕೇರಳ ಗಡಿಜಿಲ್ಲೆಯಾದ ಕಾಸರಗೋಡು ವಿದ್ಯಾರ್ಥಿಗಳಿಗೆ ಮಂಗಳೂರಿನಲ್ಲಿ ಆಯೋಜಿಸಲಾಗಿತ್ತು.

ನೆರೆಯ ಕಾಸರಗೋಡು ಜಿಲ್ಲೆಯಿಂದ 362 ವಿದ್ಯಾರ್ಥಿಗಳು ಸಿಇಟಿಗೆ ಹೆಸರು ನೊಂದಾಯಿಸಿದ್ದರು. ಇದರಲ್ಲಿ ಇಂದು 261 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 101 ವಿದ್ಯಾರ್ಥಿಗಳು ಗೈರಾಗಿದ್ದಾರೆ ಎಂದು ದ.ಕ ಜಿಲ್ಲಾ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.

ABOUT THE AUTHOR

...view details