ಮಂಗಳೂರು: ಜಿಲ್ಲೆಯಲ್ಲಿ ನಡೆದ ಗೋಲಿಬಾರ್ ಬಗ್ಗೆ ನ್ಯಾಯಾಂಗ ತನಿಖೆ ಹೊರತುಪಡಿಸಿ ಬೇರೆ ಯಾವುದೇ ತನಿಖೆಯನ್ನು ಒಪ್ಪಲಾಗದು ಎಂದು ಮುಸ್ಲಿಂ ಸೆಂಟ್ರಲ್ ಕಮಿಟಿ ತಿಳಿಸಿದೆ.
ಮಂಗಳೂರು ಗೋಲಿಬಾರ್ ಕುರಿತು ನ್ಯಾಯಾಂಗ ತನಿಖೆ ಆಗಬೇಕು: ಮುಸ್ಲಿಂ ಸೆಂಟ್ರಲ್ ಕಮಿಟಿ ಒತ್ತಾಯ
ಮಂಗಳೂರು ಗೋಲಿಬಾರ್ ಘಟನೆ ಬಗ್ಗೆ ನ್ಯಾಯಾಂಗ ತನಿಖೆ ಹೊರತುಪಡಿಸಿ ಬೇರೆ ಯಾವುದೇ ತನಿಖೆಯನ್ನು ಒಪ್ಪಲಾಗದು ಎಂದು ಮುಸ್ಲಿಂ ಸೆಂಟ್ರಲ್ ಕಮಿಟಿ ತಿಳಿಸಿದೆ.
ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಸ್ಲಿಂ ಸೆಂಟ್ರಲ್ ಕಮಿಟಿ ಅಧ್ಯಕ್ಷ ಕೆ.ಎಂ ಮಸೂದ್ ಅವರು ಮುಖ್ಯಮಂತ್ರಿಗಳನ್ನು ಭೇಟಿಯಾಗಿ ನ್ಯಾಯಾಂಗ ತನಿಖೆ ಆಗಬೇಕೆಂದು ಕೇಳಿದ್ದೇವೆ. ಮೃತಪಟ್ಟ ಕುಟುಂಬಕ್ಕೆ ಹೆಚ್ಚು ಮೊತ್ತದ ಪರಿಹಾರ ನೀಡುವಂತೆ ಕೇಳಿದ್ದೇವೆ. ಕುಟುಂಬದವರಿಗೆ ಸರಕಾರಿ ಉದ್ಯೋಗ, ಶಾಲಾ ಶಿಕ್ಷಣ ವ್ಯವಸ್ಥೆ ಮಾಡಬೇಕು ಹಾಗೂ ಗಾಯಗೊಂಡವರ ಚಿಕಿತ್ಸಾ ವೆಚ್ಚವನ್ನು ಸರಕಾರ ಭರಿಸಬೇಕು ಎಂದು ಒತ್ತಾಯಿಸಿದ್ದೇವೆ ಎಂದರು.
ಮುಸ್ಲಿಂ ಸೆಂಟ್ರಲ್ ಕಮಿಟಿಯಿಂದ ಡಿಸೆಂಬರ್ 28 ಕ್ಕೆ ನಡೆಯಬೇಕಿದ್ದ ಪ್ರತಿಭಟನೆಯನ್ನು ಜನವರಿ 4 ಕ್ಕೆ ಮುಂದೂಡಲಾಗಿದೆ. ಎನ್ಆರ್ಸಿ,ಸಿಎಎ ವಿರುದ್ಧ ನಮ್ಮ ಪ್ರತಿಭಟನೆ ಜನವರಿ 4 ರಂದು ನಡೆಯಲಿದೆ. ಕ್ರಿಸ್ಮಸ್ ಮತ್ತು ಹೊಸ ವರ್ಷದ ಆಚರಣೆಗೆ ತೊಂದರೆಯಾಗಬಾರದೆಂದು ಮುಂದೂಡಲಾಗಿದೆ ಎಂದರು.ಖಾದರ್ ಪ್ರಚೋದನಕಾರಿಯಾಗಿ ಮಾತನಾಡಿಲ್ಲ. ಆದರೆ ಸಿ.ಟಿ ರವಿ ಅವರ ಹೇಳಿಕೆಗೆ ಗೋಧ್ರಾ ಮಾಡುತ್ತೇವೆ ಎಂದಿರುವುದನ್ನು ಖಂಡಿಸುತ್ತೇವೆ. ಸಿ ಟಿ ರವಿ ಅವರು ತಮ್ಮ ಹೇಳಿಕೆಯನ್ನು ವಾಪಸ್ ಪಡೆಯಬೇಕೆಂದು ಆಗ್ರಹಿಸಿದರು.