ಮಂಗಳೂರು: ಡ್ರಗ್ಸ್ ದಂಧೆ ಬಹುದೊಡ್ಡ ಸಮಸ್ಯೆಯಾಗಿ ಕಾಡುತ್ತಿದ್ದು, ಇದನ್ನು ಬೇರು ಸಹಿತ ಕಿತ್ತು ಹಾಕಲೇಬೇಕಾಗಿದೆ. ರಾಜ್ಯ ಸರ್ಕಾರ ವಿನಂತಿ ಮಾಡಿಕೊಂಡಲ್ಲಿ ಕೇಂದ್ರ ಮಧ್ಯ ಪ್ರವೇಶಿಸಿ ಇದರ ಜಾಲವನ್ನು ಪತ್ತೆ ಹಚ್ಚಲು ತಯಾರಿದೆ ಎಂದು ಕೇಂದ್ರ ಸಚಿವ ಸದಾನಂದ ಗೌಡ ಹೇಳಿದರು.
ಡ್ರಗ್ಸ್ ದಂಧೆ ಜಾಲ ಪತ್ತೆ ಹಚ್ಚುವುದು ಸವಾಲಿನ ಕೆಲಸ: ಸಚಿವ ಸದಾನಂದ ಗೌಡ - mangalore press meet
ರಾಜ್ಯ ಸರ್ಕಾರ ಮನವಿ ಮಾಡಿದರೆ ಕೇಂದ್ರ ಸರ್ಕಾರ ಸಿಬಿಐ ಕಳುಹಿಸಲು ಸಿದ್ದವಿದೆ. ಮಾದಕ ವಸ್ತುಗಳ ಜಾಲ ಬೇಧಿಸುವುದು ಸವಾಲಿನ ಕೆಲಸ ಎಂದು ಕೇಂದ್ರ ಸಚಿವ ಸದಾನಂದ ಗೌಡ ಹೇಳಿದರು.
ಇದು ಬಹುದೊಡ್ಡ ಸವಾಲಿನ ಸಂಗತಿ. ರಾಜ್ಯ ಸರ್ಕಾರ ಸಿಬಿಐ ಕಳುಹಿಸುವಂತೆ ಮನವಿ ಮಾಡಿದರೆ ಕೇಂದ್ರ ಕೂಡಲೇ ಸ್ಪಂದಿಸಲಿದೆ. ಕೇಂದ್ರದ ಒಪ್ಪಿಗೆ ಇಲ್ಲದೇ ಸುಮೋಟೋ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು.
ರಾಜ್ಯಕ್ಕೆ ಸಂಬಂಧಿಸಿರುವ ಕಾನೂನು ಕ್ರಮಗಳನ್ನು ಆಯಾ ರಾಜ್ಯವೇ ನೋಡಿಕೊಳ್ಳಬೇಕು. ಒಂದು ವೇಳೆ ಅಂತಾರಾಜ್ಯ ಗಡಿ ಸಮಸ್ಯೆ, ರಾಷ್ಟ್ರೀಯ ಗಡಿ ಸಮಸ್ಯೆಗಳ ಬಗ್ಗೆ ತಮಗೆ ಬಗೆಹರಿಸಲು ಸಾಧ್ಯವಿಲ್ಲ ಎಂದು ರಾಜ್ಯವೇ ಕೇಂದ್ರದ ಬಳಿ ಹೇಳಿದರೆ ಮಾತ್ರ ಕೇಂದ್ರ ಆ ವಿಚಾರದಲ್ಲಿ ಮಧ್ಯ ಪ್ರವೇಶಿಸಬಹುದು. ಇದರ ಬಗ್ಗೆ ಸಂವಿಧಾನದಲ್ಲಿಯೇ ಉಲ್ಲೇಖವಿದೆ ಎಂದು ಸದಾನಂದ ಗೌಡ ಹೇಳಿದರು.