ಕರ್ನಾಟಕ

karnataka

ETV Bharat / state

ಜನರು ಆರೋಗ್ಯವಾಗಿದ್ದರೆ ದೇಶದ ಅಭಿವೃದ್ಧಿ ಸಾಧ್ಯ: ಕೇಂದ್ರ ಆಯುಷ್ ಮಂತ್ರಿ - ayush foundation

ಆಯುಷ್​ ವೈದ್ಯಕೀಯ ವಿಜ್ಞಾನವನ್ನು ವ್ಯವಹಾರ ದೃಷ್ಟಿಯಿಂದ ನೋಡದೆ, ಸೇವೆ ಎಂದು ಪರಿಗಣಿಸಿ ಎಂದು ಕೇಂದ್ರ ಸರಕಾರದ ಆಯುಷ್ ಮಂತ್ರಿ ಶ್ರೀಪಾದ ಯಸ್ಸೋ ನಾಯಕ್ ಹೇಳಿದ್ದಾರೆ.

ವೆನ್ಲಾಕ್ ಆಸ್ಪತ್ರೆಯ ಸಭಾಂಗಣದಲ್ಲಿ ನಡೆದ ಆಯುಷ್ ಫೌಂಡೇಶನ್​ನ ಕಾರ್ಯಕ್ರಮದಲ್ಲಿ ಕೇಂದ್ರ ಸರಕಾರದ ಆಯುಷ್ ಮಂತ್ರಿ ಶ್ರೀಪಾದ ಯಸ್ಸೋ ನಾಯಕ್ ಭಾಗವಹಿಸಿದ್ದರು.

By

Published : Aug 30, 2019, 2:12 AM IST

ಮಂಗಳೂರು:ಆಯುಷ್ ಎಂದಿಗೂ ಅಲೋಪಥಿಯೊಂದಿಗೆ ಸ್ಪರ್ಧಿಸುತ್ತಿಲ್ಲ. ಆಯುಷ್​ನಿಂದ ರೋಗಿಗಳು ಗುಣಮುಖರಾಗುವುದು ಮುಖ್ಯ. ಆದ್ದರಿಂದ ಆಯುಷ್​ ವೈದ್ಯಕೀಯ ವಿಜ್ಞಾನವನ್ನು ವ್ಯವಹಾರ ದೃಷ್ಟಿಯಿಂದ ನೋಡದೆ, ಸೇವೆಯಾಗಿ ಪರಿಗಣಿಸಿ ಎಂದು ಕೇಂದ್ರ ಸರಕಾರದ ಆಯುಷ್ ಮಂತ್ರಿ ಶ್ರೀಪಾದ ಯಸ್ಸೋ ನಾಯಕ್ ಹೇಳಿದರು.

ಕೇಂದ್ರ ಆಯುಷ್ ಮಂತ್ರಿ ಶ್ರೀಪಾದ ಯಸ್ಸೋ ನಾಯಕ್ ಮಾತನಾಡಿದರು.

ನಗರದ ವೆನ್ಲಾಕ್ ಆಸ್ಪತ್ರೆಯ ಸಭಾಂಗಣದಲ್ಲಿ ನಡೆದ ಆಯುಷ್ ಫೌಂಡೇಶನ್​ನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಆಯುಷ್​ನ ಯಶಸ್ಸಿನ ಹಿಂದೆ ನಾನೊಬ್ಬ ಮಾತ್ರ ಅಲ್ಲ, ಎಲ್ಲರ ಪ್ರಯತ್ನದಿಂದ ಯಶಸ್ಸು ಸಾಧಿಸಲು ಸಾಧ್ಯವಾಯಿತು ಎಂದರು.

ವೈದ್ಯಕೀಯ ವೃತ್ತಿಯನ್ನು ಸೇವೆಯಾಗಿ ಪರಿಗಣಿಸಿ, ಈ ಹಿನ್ನೆಲೆಯಲ್ಲಿ ದೇಶದ ಜನತೆ ಆರೋಗ್ಯವಾಗಿದ್ದಲ್ಲಿ ದೇಶ ಯಾವುದೇ ತೊಂದರೆಗೆ ಒಳಗಾಗದೆ ಅಭಿವೃದ್ಧಿ ಕಾಣುತ್ತದೆ. ಇದು ದೇಶದ ಪ್ರಗತಿಗೂ ಪೂರಕ. ಇದರಿಂದ ನಾವು ಯಶಸ್ಸನ್ನೂ ಸಾಧಿಸಬಹುದು ಅಭಿಪ್ರಾಯ ಪಟ್ಟರು.

ABOUT THE AUTHOR

...view details