ಮಂಗಳೂರು: ದೀಪಾವಳಿ ಹಿನ್ನೆಲೆ ಪುರಾತನ ಕಾಲದಿಂದಲೂ ಸಾಂಪ್ರದಾಯಿಕವಾಗಿ ನಡೆದುಕೊಂಡು ಬಂದಿರುವ ದೀಪಾಳೆ ಪ್ರತಿಷ್ಠಾಪನೆ ಹಬ್ಬವನ್ನು ಸಂಭ್ರಮದಿಂದ ನೆರವೇರಿಸಲಾಯಿತು.
ದೀಪಾವಳಿ ಹಿನ್ನೆಲೆ ದೀಪಾಳೆ ಪ್ರತಿಷ್ಠಾಪನೆ: ಪುರಾತನ ಕಾಲದಿಂದಲೂ ಇದೇ ಈ ಸಂಪ್ರದಾಯ - mangalore news
ಶ್ರೀ ಕುಕ್ಕೇ ಸುಬ್ರಹ್ಮಣ್ಯ ದೇವಸ್ಥಾನ ಹಾಗೂ ಶ್ರೀ ಸಂಪುಟ ನರಸಿಂಹ ಸ್ವಾಮಿ ಮಠ ಹಾಗೂ ನರಸಿಂಹ ಸ್ವಾಮಿ ದೇವಸ್ಥಾನದಲ್ಲಿ, ದಿಪಾಳೆ ಮರದ ಪ್ರತಿಷ್ಠಾಪನೆ ಕಾರ್ಯ ನಡೆಯಿತು.
ದೀಪಾವಳಿ ಹಿನ್ನೆಲೆ ದೀಪಾಳೆ ಪ್ರತಿಷ್ಠಾಪನೆ:
ಕರಾವಳಿ ಪ್ರದೇಶಗಳಲ್ಲಿ ಪ್ರತೀ ವರ್ಷವು ಈ ಸಂಪ್ರದಾಯವನ್ನು ಪಾಲನೆ ಮಾಡಿಕೊಂಡು ಬರಲಾಗುತ್ತಿದೆ. ಶ್ರೀ ಕುಕ್ಕೇ ಸುಬ್ರಹ್ಮಣ್ಯ ದೇವಸ್ಥಾನ ಹಾಗೂ ಶ್ರೀ ಸಂಪುಟ ನರಸಿಂಹ ಸ್ವಾಮಿ ಮಠ ಹಾಗೂ ನರಸಿಂಹ ಸ್ವಾಮಿ ದೇವಸ್ಥಾನದಲ್ಲಿ, ದಿಪಾಳೆ ಮರದ ಪ್ರತಿಷ್ಠಾಪನೆ ಕಾರ್ಯ ನಡೆಯಿತು.
ಪುರಾತನ ಕಾಲದಿಂದ ತುಳು ಸಂಪ್ರದಾಯ ಪ್ರಕಾರ ಬಲಿಂದ್ರ ಪೂಜೆ ಮಾಡುವ ಪದ್ಧತಿ ಚಾಲ್ತಿಯಲ್ಲಿದೆ. ಈ ಪದ್ಧತಿ ಪ್ರಕಾರ ದಿಪಾಳೆ ಮರದ ಪ್ರತಿಷ್ಠಾಪನೆ ಕಾರ್ಯ ಮಾಡಲಾಗಿದೆ