ಸುಬ್ರಹ್ಮಣ್ಯ : ಶ್ರೀ ಸಂಪುಟ ನರಸಿಂಹಸ್ವಾಮಿ ವತಿಯಿಂದ ಅಗ್ರಹಾರ ಸೋಮನಾಥೇಶ್ವರ ದೇಗುಲದಲ್ಲಿ ಮಹಾಶಿವರಾತ್ರಿಯನ್ನು ವೈಭವದಿಂದ ಇಲ್ಲಿನ ಭಕ್ತರು ಆಚರಿಸಿ ಶಿವನ ಕೃಪೆಗೆ ಪಾತ್ರರಾದರು.
ಸೋಮನಾಥೇಶ್ವರ ಸನ್ನಿಧಿಯಲ್ಲಿ ಶಿವರಾತ್ರಿ ವೈಭವ... ಶಿವ ಕೃಪೆಗೆ ಪಾತ್ರರಾದ ಭಕ್ತರು - ಸುಬ್ರಹ್ಮಣ್ಯ ಸುದ್ದಿ
ಸುಬ್ರಹ್ಮಣ್ಯದ ಶ್ರೀ ಸಂಪುಟ ನರಸಿಂಹಸ್ವಾಮಿ ವತಿಯಿಂದ ಅಗ್ರಹಾರ ಸೋಮನಾಥೇಶ್ವರ ಸನ್ನಿಧಾನದಲ್ಲಿ ಶಿವರಾತ್ರಿಯನ್ನು ವೈಭವದಿಂದ ಆಚರಿಸಲಾಯಿತು.
ಸೋಮನಾಥೇಶ್ವರ ಸನ್ನಿಧಾನದಲ್ಲಿ ಶಿವರಾತ್ರಿ ಸಂಭ್ರಮ
ಯಾಜ್ಞೆಶ್ ಆಚಾರ್ಯ ಹಾಗೂ ವಿವಿಧ ಭಜನಾ ತಂಡಗಳಿಂದ ಭಜನಾ ಕಾರ್ಯಕ್ರಮಗಳು ನಡೆಯಿತು. ಸಂಪುಟ ನರಸಿಂಹಸ್ವಾಮಿ ಮಠದ ಆಡಳಿತಾಧಿಕಾರಿ ಸುದರ್ಶನ ಜೋಯಿಸ್ ಅವರು ಜ್ಯೋತಿ ಬೆಳಗಿಸಿ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು. ಶಿವರಾತ್ರಿಯ ಶುಭ ಸಂದರ್ಭದಲ್ಲಿ ವಿಶೇಷ ಅಭಿಷೇಕ, ಪೂಜೆಗಳು ನಡೆದವು. ಶ್ರೀ ದೇವರಿಗೆ ವಿಶೇಷವಾಗಿ ಸಂಜೀವಿನಿ ಮೃತುಂಜಯ ಹೋಮ ಹಾಗೂ ಮಹಾಮಂಗಳಾರತಿಗಳು ನಡೆಸಲಾಯಿತು.
ದೇಗಲಕ್ಕೆ ಆಗಮಿಸಿದ ಎಲ್ಲಾ ಭಕ್ತರಿಗೆ ಶ್ರೀ ಸಂಪುಟ ನರಸಿಂಹಸ್ವಾಮಿ ವತಿಯಿಂದ ಭೋಜನ ವ್ಯವಸ್ತೆ ಮಾಡಲಾಯಿತು.