ಕರ್ನಾಟಕ

karnataka

ಕರ್ತವ್ಯದ ವೇಳೆ ಬಾರ್​​​ನಲ್ಲಿ ಪಾರ್ಟಿ ಮಾಡಿತಾ ಸಿಸಿಬಿ ತಂಡ..? ವಿಡಿಯೋ ವೈರಲ್​​

ಮಂಗಳೂರು ಸಿಸಿಬಿ ಪೊಲೀಸರು ಕುತ್ತಾರಿನ ಬಾರ್ ಒಂದರ ಹೊರಗಡೆ ವಾಹನ ನಿಲ್ಲಿಸಿ 8 ಮಂದಿ ಮದ್ಯ ಪಾರ್ಟಿಯಲ್ಲಿ ಭಾಗವಹಿಸಿದ್ದರೆಂದು ಹೇಳಲಾಗುತ್ತಿರುವ ವಿಡಿಯೋ ವೈರಲ್ ಆಗಿದೆ.

By

Published : Jan 30, 2021, 7:45 PM IST

Published : Jan 30, 2021, 7:45 PM IST

ccb-policemens-did-party-in-managalore-dot-video-is-viral
ಕರ್ತವ್ಯದ ವೇಳೆ ಬಾರ್​​​ನಲ್ಲಿ ಪಾರ್ಟಿ ಮಾಡಿದ್ರಾ ಸಿಸಿಬಿ ತಂಡ

ಮಂಗಳೂರು (ದ.ಕ): ಕರ್ತವ್ಯದ ಸಮಯದಲ್ಲಿ ಸಿಸಿಬಿ ಪೊಲೀಸರು ನಗರದ ಕುತ್ತಾರ್​​ ಬಾರ್​​​ನಲ್ಲಿ ಪಾರ್ಟಿ ಮಾಡಿದ್ದಾರೆಂಬ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಮಂಗಳೂರು ಸಿಸಿಬಿ ಪೊಲೀಸರು ಕುತ್ತಾರಿನ ಬಾರ್ ಒಂದರ ಹೊರಗಡೆ ವಾಹನ ನಿಲ್ಲಿಸಿ 8 ಮಂದಿ ಮದ್ಯ ಪಾರ್ಟಿಯಲ್ಲಿ ಭಾಗವಹಿಸಿದ್ದರು ಎಂದು ವಿಡಿಯೋ ವೈರಲ್ ಆಗಿದೆ. ಈ ಸಂದರ್ಭ ಕ್ರಿಕೆಟ್ ಬುಕ್ಕಿಗಳು ಜೊತೆಗಿದ್ದರು ಎಂಬ ಆರೋಪಗಳೂ ಸಹ ಕೇಳಿ ಬಂದಿದೆ.

ಕರ್ತವ್ಯದ ವೇಳೆ ಬಾರ್​​​ನಲ್ಲಿ ಪಾರ್ಟಿ ಮಾಡಿದ್ರಾ ಸಿಸಿಬಿ ತಂಡ..? ವಿಡಿಯೋ ವೈರಲ್​​

ಈ ಕುರಿತು ಡಿಸಿಪಿ ಹರಿರಾಂ ಶಂಕರ್ ಈಟಿವಿ ಭಾರತಕ್ಕೆ ಮಾಹಿತಿ ನೀಡಿದ್ದು, ಪೊಲೀಸ್ ಟಿಟಿ ವಾಹನ ಬಾರ್ ಬಳಿಗೆ ಯಾಕೆ ಹೋಗಿದೆ, ಸಿಸಿಬಿ ಪೊಲೀಸರು ಬಾರ್ ಒಳಗೆ ಯಾಕೆ ತೆರಳಿದ್ದಾರೆಂದು ಪರಿಶೀಲನೆ ನಡೆಸಲಾಗುತ್ತದೆ ಎಂದಿದ್ದಾರೆ.

ಇದನ್ನೂ ಓದಿ:ಮನೆಗೆ ಬೆಂಕಿ: ಪ್ಲಾಸ್ಟಿಕ್ ಉತ್ಪನ್ನಗಳು ಅಗ್ನಿಗಾಹುತಿ

ABOUT THE AUTHOR

...view details