ಮಂಗಳೂರು:ಸ್ಯಾಂಡಲ್ವುಡ್ಡ್ರಗ್ ಪ್ರಕರಣದ ನಂಟು ಆರೋಪ ಪ್ರಕರಣದಲ್ಲಿ ಬಂಧಿತನಾಗಿರುವ ನಟ ಕಿಶೋರ್ ಶೆಟ್ಟಿ ಸ್ನೇಹಿತನನ್ನು ಪೊಲೀಸರು ಬಂಧಿಸಿದ್ದು, ಕಿರುತೆರೆ ನಿರೂಪಕಿ ಅನುಶ್ರೀ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲು ಸಿಸಿಬಿ ಪೊಲೀಸರು ಬೆಂಗಳೂರಿಗೆ ತೆರಳಿದ್ದಾರೆ.
ಡ್ರಗ್ಸ್ ಪ್ರಕರಣದಲ್ಲಿ ನಿರೂಪಕಿ ಅನುಶ್ರೀ ಹೆಸರು, ನೋಟಿಸ್ ನೀಡಲು ಬೆಂಗಳೂರಿಗೆ ತೆರಳಿದ ಕುಡ್ಲ ಪೊಲೀಸರು - ಆ್ಯಂಕರ್ ಅನುಶ್ರೀ ವಿಚಾರಣೆ
ಡ್ರಗ್ ದಂಧೆ ನಂಟು ಆರೋಪ ಪ್ರಕರಣದಲ್ಲಿ ಬಂಧಿತನಾಗಿರುವ ಬಾಲಿವುಡ್ ನಟ ಕಿಶೋರ್ ಶೆಟ್ಟಿ ಸ್ನೇಹಿತ ತರುಣ್ನನ್ನು ಪೊಲೀಸರು ಬಂಧಿಸಿದ್ದು, ಸದ್ಯ ನಿರೂಪಕಿ ಅನುಶ್ರೀ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲು ಸಿಸಿಬಿ ಮುಂದಾಗಿದೆ.

ನಿರೂಪಕಿ ಅನುಶ್ರೀಗೆ ನೋಟಿಸ್
ಬಾಲಿವುಡ್ ನಟ ಕಿಶೋರ್ ಶೆಟ್ಟಿಗೆ ಡ್ರಗ್ಸ್ ಲೋಕದ ಪರಿಚಯ ಮಾಡಿಕೊಟ್ಟಿರುವ ತರುಣ್ ಬಂಧಿತ ಆರೋಪಿ. ಕಿಶೋರ್ ಶೆಟ್ಟಿ ವಿಚಾರಣೆ ವೇಳೆ ತರುಣ್ ಬಗ್ಗೆ ಬಾಯಿಬಿಟ್ಟಿದ್ದಾನೆ. ಈತನನ್ನು ವಿಚಾರಣೆ ನಡೆಸಿ ಡ್ರಗ್ಸ್ ತೆಗೆದುಕೊಂಡಿರುವ ಬಗ್ಗೆ ವೈದ್ಯಕೀಯ ಪರೀಕ್ಷೆ ನಡೆಸಿದ್ದರು. ಈ ವೇಳೆ ಈತನ ರಿಪೋರ್ಟ್ ಪಾಸಿಟಿವ್ ಬಂದಿದೆ.
ಕಿಶೋರ್ ಶೆಟ್ಟಿ ವಿಚಾರಣೆಯ ವೇಳೆ ಬೆಂಗಳೂರಿನಲ್ಲಿರುವ ನಿರೂಪಕಿ ಅನುಶ್ರೀ ಜೊತೆಗೆ ಪಾರ್ಟಿ ಮಾಡಿರುವುದಾಗಿ ತಿಳಿಸಿದ್ದಾನೆ. ಈ ಹಿನ್ನೆಲೆಯಲ್ಲಿ ಅನುಶ್ರೀಗೆ ನೋಟಿಸ್ ನೀಡಲು ಸಿಸಿಬಿ ಪೊಲೀಸರು ಬೆಂಗಳೂರಿಗೆ ತೆರಳಿದ್ದಾರೆ.