ಕರ್ನಾಟಕ

karnataka

ETV Bharat / state

ದಕ್ಷಿಣಕನ್ನಡದಲ್ಲಿ ಗುಂಡಿ ತೆಗೆಯುವಾಗ ಗುಹೆ.. ಪ್ರಾಚೀನ ಪರಿಕರಗಳು ಪತ್ತೆ - ಗುಂಡಿ ತೆಗೆಯುವ ವೇಳೆ ಗುಹೆ ಪತ್ತೆ

ಎಡಮಂಗಲ ಕಲ್ಲೆಂಬಿ ವಿಶ್ವನಾಥ ಗೌಡ ಎಂಬುವವರ ಜಮೀನಿನಲ್ಲಿ ಈ ಪ್ರಾಚೀನ ಪರಿಕರಗಳು ಪತ್ತೆಯಾಗಿವೆ.

ancient tools found in sullia
ಪ್ರಾಚೀನ ಪರಿಕರಗಳು ಪತ್ತೆ

By

Published : Aug 27, 2022, 10:50 AM IST

ಸುಳ್ಯ(ದಕ್ಷಿಣ ಕನ್ನಡ):ಗುಡ್ಡದಲ್ಲಿ ಗುಂಡಿ ತೆಗೆಯುವ ವೇಳೆ ಗುಹೆ ಪತ್ತೆಯಾಗಿ ಅದರಲ್ಲಿ ಪ್ರಾಚೀನ ಕಾಲದ ಮಣ್ಣಿನ ಪರಿಕರಗಳು ಪತ್ತೆಯಾಗಿರುವ ಕುತೂಹಲಕಾರಿ ಘಟನೆ ಕಡಬ ತಾಲೂಕಿನ ಎಡಮಂಗಲ ಗ್ರಾಮದ ಕಲ್ಲೆಂಬಿ ಎಂಬಲ್ಲಿ ನಡೆದಿದೆ.

ಎಡಮಂಗಲ ಕಲ್ಲೆಂಬಿ ವಿಶ್ವನಾಥ ಗೌಡ ಎಂಬುವವರ ಜಮೀನಿನಲ್ಲಿ ಈ ಪ್ರಾಚೀನ ಪರಿಕರಗಳು ಪತ್ತೆಯಾಗಿವೆ. ರಬ್ಬರ್ ತೋಟ ತೆರವು ಮಾಡಿ ಅಡಕೆ ತೋಟ ಮಾಡುವ ಉದ್ದೇಶದಿಂದ ಜೆಸಿಬಿ ಯಂತ್ರದ ಮೂಲಕ ಅಡಕೆ ಗುಂಡಿ ತೆಗೆಯುವಾಗ ಇವು ಕಾಣಸಿಕ್ಕಿವೆ.

ಪ್ರಾಚೀನ ಪರಿಕರಗಳು ಪತ್ತೆ

ಕೆಲಸದ ವೇಳೆ ಇದ್ದಕ್ಕಿದ್ದಂತೆ ಮಣ್ಣಿನಲ್ಲಿ ಸಡಿಲವಾದ ಭಾಗ ಗೋಚರಿಸಿದ್ದು ಇಲ್ಲಿ ಗುಹೆಯಾಕಾರ ಮಾದರಿ ಪತ್ತೆಯಾಗಿದೆ. ಅದನ್ನು ಸೂಕ್ಷವಾಗಿ ಗಮನಿಸಿದಾಗ ಇದರೊಳಗಡೆ ಮಣ್ಣಿನ ಮಡಿಕೆ, ಬಟ್ಟಲು, ಸಣ್ಣ-ಪುಟ್ಟ ಪಾತ್ರೆಗಳ ಅವಶೇಷಗಳು ಪತ್ತೆಯಾಗಿದೆ. ವಿಶೇಷ ರೀತಿಯ ಗುಹೆಯಲ್ಲಿ ಎರಡು ಅಂತರದ ಕೋಣೆಗಳಿರುವಂತೆ ಕಂಡು ಬಂದಿದೆ.

ಪ್ರಾಚೀನ ಪರಿಕರಗಳು ಪತ್ತೆ

ಪರಿಕರಗಳ ಅಧ್ಯಯನ: ಪುರಾತನ ಕಾಲದಲ್ಲಿ ಉದ್ದೇಶಪೂರ್ವಕವಾಗಿ ಸಣ್ಣ ಮಾದರಿಯ ಗುಹೆ ತೋಡಿ ಪರಿಕರಗಳನ್ನು ಇದರಲ್ಲಿ ಹೂತು ಮುಚ್ಚಿರಬಹುದು ಎಂಬ ಮಾತು ಸ್ಥಳೀಯವಾಗಿ ಕೇಳಿಬರುತ್ತಿದೆ. ಉಡುಪಿಯ ಶಿರ್ವ ಎಂಎಸ್‌ಆರ್‌ಎಸ್ ಕಾಲೇಜಿನ ಅಸೋಸಿಯೇಟ್ ಪ್ರೊಫೆಸರ್, ಪ್ರಾಚ್ಯವಸ್ತು ಸಂಶೋಧಕ ಪ್ರೊ.ಟಿ.ಮುರುಗೇಶಿ ಅವರು ಸ್ಥಳಕ್ಕೆ ಆಗಮಿಸಿ ಪರಿಕರಗಳನ್ನು ಸಂಗ್ರಹಿಸಿ, ಅಧ್ಯಯನ ನಡೆಸುತ್ತಿದ್ದಾರೆ. ಈಗಾಗಲೇ ಈ ಪ್ರಾಚೀನ ಪರಿಕರಗಳನ್ನು ತೊಳೆದು ಸ್ವಚ್ಚಗೊಳಿಸಿದ್ದೇವೆ ಮುಂದಿನ ದಿನಗಳಲ್ಲಿ ಇದರ ಹಿನ್ನೆಲೆಯ ಬಗ್ಗೆ ಸ್ಪಷ್ಟ ಮಾಹಿತಿ ನೀಡುವುದಾಗಿ ಅವರು ಹೇಳಿದ್ದಾರೆ.

ಪ್ರಾಚೀನ ಪರಿಕರಗಳು ಪತ್ತೆ

ಇದನ್ನೂ ಓದಿ:ಕಾಫಿನಾಡಿನಲ್ಲಿ ಮಳೆ ಅಬ್ಬರ: 50 ಕೆರೆಗಳು ಸಂಪೂರ್ಣ ಭರ್ತಿ

ABOUT THE AUTHOR

...view details