ಮಂಗಳೂರು:ಗೋವು ಕಳ್ಳತನ ಮಾಡುತ್ತಿದ್ದ ಆರೋಪದ ಮೇಲೆ ಇಬ್ಬರನ್ನು ಬಂಟ್ವಾಳ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.
ಗೋ ಕಳ್ಳರ ಬಂಧನ.. ಕೃತ್ಯಕ್ಕೆ ಬಳಸಿದ್ದ ಓಮ್ನಿ ಕಾರು, ಹಸು ವಶ.. - mangaluru cattle robbery
ಗೋವು ಕಳ್ಳತನ ಮಾಡುತ್ತಿದ್ದ ಆರೋಪದ ಮೇಲೆ ಇಬ್ಬರನ್ನು ಬಂಟ್ವಾಳ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ. ಜೊತೆಗೆ ಕೃತ್ಯಕ್ಕೆ ಬಳಸಿದ್ದ ಓಮ್ನಿ ಕಾರು ಹಾಗೂ ಕಳವು ಮಾಡಿದ್ದ ಹಸುವನ್ನೂ ವಶಕ್ಕೆ ಪಡೆದಿದ್ದಾರೆ.
ಗೋ ಕಳ್ಳರ ಬಂಧನ: ಕೃತ್ಯಕ್ಕೆ ಬಳಸಿದ್ದ ಓಮ್ನಿ ಕಾರು, ಕಳವಾಗಿದ್ದ ಹಸು ವಶ
ಬಂಟ್ವಾಳ ತಾಲೂಕಿನ ಬೋಳಂತೂರು ಗ್ರಾಮದ ನಿವಾಸಿ ನಜಾದುದ್ದೀನ್ ಹಾಗೂ ಅರ್ಕುಳ ಗ್ರಾಮದ ಅಬ್ದುಲ್ ಸಲಾಂ ಬಂಧಿತ ಆರೋಪಿಗಳು.
ನವೆಂಬರ್ 28ರಂದು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಸಜೀಪನಡುವಿನಲ್ಲಿ ಸಜೀಪದಿಂದ ಕಂಚಿನಡ್ಕಕ್ಕೆ ತೆರಳುವ ರಸ್ತೆಯಲ್ಲಿ ದನಗಳ ಕಳವಾಗಿರುವ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆ ನಡೆಸಿದ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಜೊತೆಗೆ ಕೃತ್ಯಕ್ಕೆ ಬಳಸಿದ್ದ ಓಮ್ನಿ ಕಾರು ಹಾಗೂ ಕಳವು ಮಾಡಿದ್ದ ಹಸುವನ್ನೂ ವಶಕ್ಕೆ ಪಡೆದಿದ್ದಾರೆ.