ಮಂಗಳೂರು: ರೆಸ್ಟೋರೆಂಟ್ ಲಾಕರ್ನಲ್ಲಿಟ್ಟಿದ್ದ 4.50 ಲಕ್ಷ ರೂಪಾಯಿಯನ್ನು ಕದ್ದಿರುವ ಘಟನೆ ಮೂಡುಬಿದಿರೆ ತಾಲೂಕಿನ ಅಲಂಗಾರುವಿನ ಗೋಲ್ಡನ್ ಗೇಟ್ ಫ್ಯಾಮಿಲಿ ಬಾರ್ ಆ್ಯಂಡ್ ರೆಸ್ಟೋರೆಂಟ್ನಲ್ಲಿ ನಡೆದಿದೆ.
ಕೆಎಸ್ಬಿಸಿಎಲ್ ಪರ್ಮಿಟ್ ಕಟ್ಟಬೇಕೆಂದು 4.50 ಲಕ್ಷ ರೂಪಾಯಿ ನಗದನ್ನು ಕಪ್ಪು ಬಣ್ಣದ ಬ್ಯಾಗ್ನಲ್ಲಿರಿಸಿ ರಿಸೆಪ್ಷನ್ ಕೌಂಟರ್ ಬಳಿಯಿರುವ ಲಾಕರ್ನಲ್ಲಿ ಇರಿಸಲಾಗಿತ್ತು. ಡಿಸೆಂಬರ್ 22ರ ಸಂಜೆ 5.30ಯಿಂದ 23ರ ಬೆಳಗ್ಗೆ 10 ಗಂಟೆಯ ಹಣವನ್ನು ಕಳವು ಮಾಡಲಾಗಿದೆ ಎಂದು ಹೊಟೇಲ್ ಮಾಲೀಕ ಕೃಷ್ಣಪ್ಪ ಕೊರಗ ಕರ್ಕೇರ ಹೇಳಿದ್ದಾರೆ.