ಕರ್ನಾಟಕ

karnataka

ETV Bharat / state

ಅಕ್ರಮವಾಗಿ ಗೋ ಸಾಗಾಟ ಮಾಡುತ್ತಿದ್ದ ಕಾರು ಪಲ್ಟಿ..  ಮಂಗಳೂರಿನಲ್ಲಿ 6 ಜಾನುವಾರುಗಳ ದುರ್ಮರಣ - undefined

ಗೋವುಗಳನ್ನು ಹಿಂಸಾತ್ಮಕವಾಗಿ ಕೂಡಿ ಹಾಕಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ವಾಹನ ಪಲ್ಟಿಯಾಗಿ 6 ಜಾನುವಾರುಗಳು ಮೃತಪಟ್ಟಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಮುಂಡಾಜೆ ಎಂಬಲ್ಲಿ ನಡೆದಿದೆ.

6 ಜಾನುವಾರುಗಳು ಸಾವು

By

Published : Jun 7, 2019, 12:38 PM IST

ಮಂಗಳೂರು:ಗೋವುಗಳನ್ನು ಹಿಂಸಾತ್ಮಕವಾಗಿ ಕೂಡಿ ಹಾಕಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಕಾರು ಪಲ್ಟಿಯಾಗಿ 6 ಜಾನುವಾರುಗಳು ಮೃತಪಟ್ಟಿರುವ ಘಟನೆ
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಮುಂಡಾಜೆ ಎಂಬಲ್ಲಿ ನಡೆದಿದೆ.

ಅಕ್ರಮವಾಗಿ ಗೋ ಸಾಗಾಟ ಮಾಡುತ್ತಿದ್ದ ವಾಹನ ಪಲ್ಟಿ

ಇಂದು ಚಾರ್ಮಾಡಿಯಿಂದ ಉಜಿರೆಯ ಕಡೆ ಅಕ್ರಮವಾಗಿ ಜಾನುವಾರುಗಳನ್ನು ಹಿಂಸಾತ್ಮಕವಾಗಿ ಕೂಡಿ ಹಾಕಿ ಐಷಾರಾಮಿ ಕಾರೊಂದರಲ್ಲಿ ಸಾಗಾಟ ಮಾಡಲಾಗುತ್ತಿತ್ತು. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ಕಾರು ಕಮರಿಗೆ ಉರುಳಿ ಬಿದ್ದಿದೆ. ಪರಿಣಾಮ ಕಾರಿನೊಳಗಿದ್ದ 6 ದನಗಳು ಮೃತಪಟ್ಟಿವೆ. ಈ ಘಟನೆ ಬಳಿಕ ಆರೋಪಿಗಳು ಅಲ್ಲಿಂದ ಪರಾರಿಯಾಗಿದ್ದಾರೆ.ಈ ಕೃತ್ಯಕ್ಕೆ ಬೆಂಗಳೂರು ನೋಂದಣಿಯ ಕಾರನ್ನು ಬಳಸಲಾಗಿದೆ. ಇದನ್ನ ಕಳ್ಳತನ ಮಾಡಿಯೋ ಅಥವಾ ನಕಲಿ ನೋಂದಣಿ ಪ್ಲೇಟ್ ಹಾಕಿ ಗೋ ಸಾಗಾಟ ಮಾಡಲಾಗ್ತಾಯಿರೋ ಬಗ್ಗೆ ಶಂಕೆ ಮೂಡಿದೆ.

ಕಾರಿನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಗೋವುಗಳಿಗೆ ಪ್ರಜ್ಞೆ ತಪ್ಪಿಸುವ ಬ್ರೇಡ್​ನಲ್ಲಿ ಮತ್ತು ಬರುವ ಪದಾರ್ಥಗಳನ್ನು ತಿನ್ನಿಸಿರುವ ಶಂಕೆಯಿಗೆ. ಇದಕ್ಕೆ ಪುಷ್ಠಿ ನೀಡುವಂತೆ ಕಾರಿನಲ್ಲಿ ಬ್ರೇಡ್ ಪ್ಯಾಕೇಟ್​ಗಳು ಪತ್ತೆಯಾಗಿದೆ.ಚಾರ್ಮಾಡಿ ಚೆಕ್ ಪೋಸ್ಟ್​​ನಲ್ಲಿ ವಾಹನಗಳನ್ನು ತಪಾಸಣೆ ಮಾಡಬೇಕಾಗಿತ್ತು. ಆದರೆ, ತಪಾಸಣೆ ನಡೆಸದೆ ಇರೋದು ಇಲ್ಲಿನ ಭದ್ರತಾ ವೈಫಲ್ಯವನ್ನು ಎತ್ತಿ ತೋರಿಸುತ್ತಿದೆ.

For All Latest Updates

TAGGED:

ABOUT THE AUTHOR

...view details