ಕರ್ನಾಟಕ

karnataka

ETV Bharat / state

ಮೊಬೈಲ್ ಸುಲಿಗೆಗೆ ಕಾರ್ ಡ್ರೈವರ್ ಹತ್ಯೆ; ಮಂಗಳೂರಿನಲ್ಲಿ ನಾಲ್ವರು ಅರೆಸ್ಟ್

ಕಾರ್ ಡ್ರೈವರ್ ಮೊಬೈಲ್ ಸುಲಿಗೆ ಮಾಡಿ ಕೊಲೆ ಮಾಡಿದ ನಾಲ್ವರು ಆರೋಪಿಗಳನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.

ಜನಾರ್ದನ ಪೂಜಾರಿ
ಜನಾರ್ದನ ಪೂಜಾರಿ

By

Published : Apr 19, 2023, 10:55 PM IST

ಮಂಗಳೂರು : ನಗರದ ನೆಹರೂ ಮೈದಾನದಲ್ಲಿ ಮಲಗಿದ್ದ ಕಾರ್​ ಡ್ರೈವರ್ ಮೊಬೈಲ್ ಸುಲಿಗೆ ಮಾಡಿ ಕೊಲೆಗೈದ ನಾಲ್ವರು ಆರೋಪಿಗಳನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. ಕೇರಳ ರಾಜ್ಯದ ತಿರುವನಂತಪುರಂ ಜಿಲ್ಲೆಯ ನೆಲಮಂಗಾಡ ನಿವಾಸಿ ಪ್ರಶಾಂತ್ (40), ಬಂಟ್ವಾಳ ತಾಲೂಕಿನ ಕಸಬ, ವಿಟ್ಲ ನಿವಾಸಿ ಶರತ್.ವಿ (36) ಮಡಿಕೇರಿ ಕುಶಾಲನಗರ ನಿವಾಸಿ ಜಿ ಕೆ ರವಿಕುಮಾರ್ ಅಲಿಯಾಸ್ ನಂದೀಶ(38), ಮಂಗಳೂರು ನಗರದ ಕೊಣಾಜೆ, ಅಂಬ್ಲಮೊಗರು ನಿವಾಸಿ ವಿಜಯ ಕುಟಿನ್ಹಾ (28) ಬಂಧಿತರು.

ಕಾರು ಚಾಲಕ ಜನಾರ್ದನ ಪೂಜಾರಿ ಏಪ್ರಿಲ್ 14ರಂದು ನೆಹರೂ ಮೈದಾನದ ಫುಟ್​ಬಾಲ್​ ಗ್ರೌಂಡ್​ನ ಪಬ್ಲಿಕ್ ಗ್ಯಾಲರಿಯ ಮೇಲೆ ಮಲಗಿಕೊಂಡಿದ್ದರು. ಈ ಸಂದರ್ಭ ನಾಲ್ಕು ಮಂದಿ ಆರೋಪಿಗಳು ಮಲಗಿದ್ದ ಜನಾರ್ದನ ಪೂಜಾರಿ ಅವರ ಪ್ಯಾಂಟ್ ಕಿಸೆಯಿಂದ ಮೊಬೈಲ್ ಕಸಿದುಕೊಳ್ಳಲು ಯತ್ನಿಸಿದ್ದಾರೆ. ಜನಾರ್ದನ ಪೂಜಾರಿಯವರು ಪ್ರತಿಭಟಿಸಿದಾಗ ಆರೋಪಿಗಳು ಅವರನ್ನು ಕೊಲೆ ಮಾಡುವ ಉದ್ದೇಶದಿಂದ ಎದೆಗೆ ಒದ್ದು 6 ಅಡಿ ಮೇಲಿನಿಂದ ಕೆಳಗೆ ತಳ್ಳಿದ್ದಾರೆ. ಆ ಬಳಿಕ ನಾಲ್ವರು ಜನಾರ್ದನ ಪೂಜಾರಿಯವರು ಬಿದ್ದಿರುವಲ್ಲಿಗೆ ಹೋಗಿ, ಮತ್ತೆ ಹಲ್ಲೆ ನಡೆಸಿ, ಕಾಲಿನಿಂದ ತುಳಿದು ಮೊಬೈಲ್ ಅನ್ನು ಸುಲಿಗೆ ಮಾಡಿದ್ದಾರೆ.

ಆರೋಪಿಗಳು ನಡೆಸಿರುವ ಹಲ್ಲೆಯಿಂದ ಜನಾರ್ದನ ಪೂಜಾರಿ ಗಂಭೀರವಾಗಿ ಗಾಯಗೊಂಡು ಸಾವನ್ನಪ್ಪಿದ್ದರು. ಇದೀಗ ಆರೋಪಿಗಳನ್ನು ನಗರದ ಸೆಂಟ್ರಲ್ ರೈಲ್ವೇ ನಿಲ್ದಾಣದ ಮುತ್ತಪ್ಪ ಗುಡಿಯ ಬಳಿಯಿಂದ ಪೊಲೀಸರು ಬಂಧಿಸಿ, ಮೊಬೈಲ್ ಅನ್ನು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅನಧಿಕೃತವಾಗಿ ಸಾಗಿಸುತ್ತಿದ್ದ 60 ಲಕ್ಷ ಜಪ್ತಿ- ವ್ಯಕ್ತಿ ಬಂಧನ: ಸಾರಿಗೆ ವಾಹನದಲ್ಲಿ ಅನಧಿಕೃತವಾಗಿ ಹಣ ಸಾಗಿಸುತ್ತಿದ್ದ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ಪೊಲೀಸರು 60.50 ಲಕ್ಷ ಮೊತ್ತದ ನಗದು ಸಮೇತ ವ್ಯಕ್ತಿಯೊಬ್ಬರನ್ನು ಬಂಧಿಸಿ ವಶಕ್ಕೆ ಪಡೆದುಕೊಂಡ ಘಟನೆ ಗಂಗಾವತಿ ಗ್ರಾಮೀಣ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ. ತಾಲ್ಲೂಕಿನ ವಿದ್ಯಾನಗರ ಜಂಗಮರ ಕಲ್ಗುಡಿ ಗ್ರಾಮದ ಮಧ್ಯೆ ಇರುವ ಚೆಕ್​ ಪೋಸ್ಟ್​ನಲ್ಲಿ ಮಧ್ಯರಾತ್ರಿ ಎರಡುವರೆ ಗಂಟೆಯ ಸುಮಾರಿಗೆ ಸಿಂಧನೂರಿನಿಂದ ಶಿವಮೊಗ್ಗದತ್ತ ತೆರಳುತ್ತಿದ್ದ ದುರ್ಗಾಂಬಾ ಟ್ರಾವೆಲ್ಸ್ ಎಂಬ ವಾಹನದಲ್ಲಿ ಹಣ ಸಾಗಿಸುತ್ತಿರುವ ಖಚಿತ ಮಾಹಿತಿ ಮೇರೆಗೆ ಪೊಲೀಸರು ಶೋಧನೆ ನಡೆಸಿದ್ದಾರೆ.

ಈ ಸಂದರ್ಭದಲ್ಲಿ ವಿಜಯಕುಮಾರ್ ಎಂಬ ವ್ಯಕ್ತಿಯ ಬ್ಯಾಗ್​ನಲ್ಲಿ 60.50 ಲಕ್ಷ ಮೊತ್ತದ ಹಣ ಇರುವುದು ಪತ್ತೆಯಾಗಿದೆ. ಯಾವುದೇ ದಾಖಲೆಗಳಿಲ್ಲದೇ ಹಣ ಸಾಗಿಸುತ್ತಿರುವುದು ಖಚಿತವಾದ ಹಿನ್ನೆಲೆ ಹಣ ಜಪ್ತಿ ಮಾಡಿದ ಪೊಲೀಸರು ವ್ಯಕ್ತಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ತಾನು ಗುಲ್ಬರ್ಗದ ನಿವಾಸಿಯಾಗಿದ್ದ ಕಾರ್ಯ ನಿಮಿತ್ತ ದಾವಣಗೆರೆಗೆ ಹಣ ತೆಗೆದುಕೊಂಡು ಹೊರಟಿದ್ದಾಗಿ ವಿಜಯಕುಮಾರ, ಪೊಲೀಸರಿಗೆ ತಿಳಿಸಿದ್ದಾರೆ.

ದೂರು ದಾಖಲಿಸಿಕೊಂಡ ಪೊಲೀಸರು, ಜಪ್ತಿಮಾಡಿಕೊಂಡಿದ್ದ ನಗದು ಹಣವನ್ನು ವಾಣಿಜ್ಯ ತೆರಿಗೆ ಇಲಾಖೆಯ ಅಧಿಕಾರಿಗಳ ವಶಕ್ಕೆ ನೀಡಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋಧಾ ಒಂಟಿಗೋಡೆ ನಿರ್ದೇಶನದ ಮೇರೆಗೆ ಡಿವೈಎಸ್​ಪಿ ಶೇಖರಪ್ಪ ಅವರ ಮಾರ್ಗದರ್ಶನದಲ್ಲಿ ದಾಳಿ ಮಾಡಲಾಗಿದೆ ಎಂದು ಗಂಗಾವತಿ ಗ್ರಾಮೀಣ ಪೊಲೀಸರು ತಿಳಿಸಿದ್ದಾರೆ.

ಗುಲ್ಬರ್ಗದ ನಿವಾಸಿಯಾಗಿದ್ದ ಕಾರ್ಯ ನಿಮಿತ್ತ ದಾವಣಗೆರೆಗೆ ಹಣ ತೆಗೆದುಕೊಂಡು ಹೊರಟಿದ್ದಾಗಿ ವಿಜಯಕುಮಾರ, ಪೊಲೀಸರಿಗೆ ತಿಳಿಸಿದ್ದಾರೆ. ಈ ಸಂಬಂಧ ದೂರು ದಾಖಲಿಸಿಕೊಂಡ ಪೊಲೀಸರು, ಜಪ್ತಿಮಾಡಿಕೊಂಡಿದ್ದ ನಗದು ಹಣವನ್ನು ವಾಣಿಜ್ಯ ತೆರಿಗೆ ಇಲಾಖೆಯ ಅಧಿಕಾರಿಗಳ ವಶಕ್ಕೆ ನೀಡಿದ್ದಾರೆ.

ಇದನ್ನೂ ಓದಿ:ಬೀದರ್‌: ₹1.65 ಕೋಟಿ ಮೌಲ್ಯದ ಗಾಂಜಾ ಜಪ್ತಿ

ABOUT THE AUTHOR

...view details