ಕರ್ನಾಟಕ

karnataka

ETV Bharat / state

ಮಂಗಳೂರು: ಎರಡು ಆ್ಯಂಬುಲೆನ್ಸ್​​​ಗೆ ದಾರಿ ಬಿಡದೆ ಉದ್ಧಟತನ ಮೆರೆದಿದ್ದ ಕಾರು ಚಾಲಕ ಅಂದರ್​ - ಮಂಗಳೂರಿನಲ್ಲಿ ಎರಡು ಆ್ಯಂಬುಲೆನ್ಸ್​​​ಗೆ ದಾರಿ ಬಿಡದೆ ಪುಂಡಾಟ ಮೇರೆದ ಕಾರು ಚಾಲಕನ ಬಂಧನ

ಬುಧವಾರ ಮಂಗಳೂರಿನಿಂದ ಭಟ್ಕಳಕ್ಕೆ ರೋಗಿಯೊಬ್ಬರನ್ನು ಆ್ಯಂಬುಲೆನ್ಸ್​​​ನಲ್ಲಿ ಕೊಂಡೊಯ್ಯುತ್ತಿದ್ದಾಗ ಕಾರು ಚಾಲಕ ದಾರಿ ಬಿಡದೆ ಸತಾಯಿಸಿದ್ದ. ಹಾಗೂ ರಾತ್ರಿ ಮಣಿಪಾಲದಿಂದ ಮಂಗಳೂರಿಗೆ ಬರುತ್ತಿದ್ದ ಆ್ಯಂಬುಲೆನ್ಸ್​​​ಗೂ ಈತ ದಾರಿ ಬಿಡದೆ ಪುಂಡಾಟ ಮೆರೆದಿದ್ದ ಯುವಕನನ್ನ ಪೊಲೀಸರು ಬಂಧಿಸಿದ್ದಾರೆ.

ಮಂಗಳೂರಿನಲ್ಲಿ ಕಾರು ಚಾಲಕ ಬಂಧನ
ಮಂಗಳೂರಿನಲ್ಲಿ ಕಾರು ಚಾಲಕ ಬಂಧನ

By

Published : Jan 20, 2022, 7:32 PM IST

Updated : Jan 20, 2022, 7:47 PM IST

ಮಂಗಳೂರು :ಎರಡು ಬೇರೆ ಬೇರೆ ಆ್ಯಂಬುಲೆನ್ಸ್​​​ಗಳಿಗೆ ಕಿಲೋಮೀಟರ್​ಗಟ್ಟಲೇ ದಾರಿ ಬಿಡದೆ ಉದ್ಧಟತನದಿಂದ ವರ್ತಿಸಿದ ಕಾರು ಚಾಲಕನನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. ಮೋನಿಶ್ ಬಂಧಿತ ಕಾರು ಚಾಲಕ.

ಆ್ಯಂಬುಲೆನ್ಸ್​​​ಗೆ ದಾರಿ ಬಿಡದೆ ಉದ್ಧಟತನ ಮೆರೆದಿದ್ದ ಕಾರು ಚಾಲಕ

ಬುಧವಾರ ಮಂಗಳೂರಿನಿಂದ ಭಟ್ಕಳಕ್ಕೆ ರೋಗಿಯೊಬ್ಬರನ್ನು ಆ್ಯಂಬುಲೆನ್ಸ್​​​ನಲ್ಲಿ ಕೊಂಡೊಯ್ಯುತ್ತಿದ್ದಾಗ ಕಾರು ಚಾಲಕ ದಾರಿ ಬಿಡದೆ ಸತಾಯಿಸಿದ್ದ. ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿಯಿಂದ ಉಡುಪಿಯವರೆಗೆ ಸುಮಾರು 40 ಕಿಲೋಮೀಟರ್ ಈತ ಆ್ಯಂಬುಲೆನ್ಸ್ ಗೆ ದಾರಿ ಬಿಟ್ಟಿರಲಿಲ್ಲ. KA19 Md 6843 ಎಂಬ ರಿಜಿಸ್ಟ್ರೇಷನ್ ನಂಬರ್​ನ ಕಾರಿನ ಚಾಲಕ ಈ ರೀತಿ ಸತಾಯಿಸಿದ್ದಾನೆ. ಇದನ್ನು ಆ್ಯಂಬುಲೆನ್ಸ್ ನಲ್ಲಿದ್ದ ಸಿಬ್ಬಂದಿ ವಿಡಿಯೋ ಮಾಡಿದ್ದರು.

ಇಷ್ಟು ಮಾತ್ರವಲ್ಲದೇ ರಾತ್ರಿ ಮಣಿಪಾಲದಿಂದ ಮಂಗಳೂರಿಗೆ ಬರುತ್ತಿದ್ದ ಆ್ಯಂಬುಲೆನ್ಸ್​​​ಗೂ ಈತ ದಾರಿ ಬಿಡದೆ ಸತಾಯಿಸಿದ್ದಾನೆ. ಈತನ‌ ದುರ್ವರ್ತನೆಯ ವಿಡಿಯೋ ಇಂದು ವೈರಲ್ ಆದ ಬೆನ್ನಲ್ಲೇ ಮಂಗಳೂರು ಉತ್ತರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಳಿಕ ಕಾರು ಚಾಲಕನನ್ನು ಬಂಧಿಸಿರುವ ಪೊಲೀಸರು ಕಾರನ್ನು ವಶಕ್ಕೆ ಪಡೆದಿದ್ದಾರೆ.

ಜಾಹಿರಾತು : ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

Last Updated : Jan 20, 2022, 7:47 PM IST

For All Latest Updates

ABOUT THE AUTHOR

...view details