ಕರ್ನಾಟಕ

karnataka

ETV Bharat / state

ಕಾರು-ಲಾರಿ ನಡುವೆ ಡಿಕ್ಕಿ: ಮಗು ಸಾವು, ನಾಲ್ವರಿಗೆ ಗಾಯ - Road accident in ujire charmadi highway

ಬೆಳ್ತಂಗಡಿಯಲ್ಲಿ ಕಾರು-ಲಾರಿ ಮಧ್ಯೆ ಡಿಕ್ಕಿ ಸಂಭವಿಸಿದ ಪರಿಣಾಮ ಮಗುವೊಂದು ಸಾವನ್ನಪ್ಪಿದ್ದು, ನಾಲ್ವರು ಗಾಯಗೊಂಡಿದ್ದಾರೆ.

ಕಾರು-ಲಾರಿ ನಡುವೆ ಡಿಕ್ಕಿ
ಕಾರು-ಲಾರಿ ನಡುವೆ ಡಿಕ್ಕಿ

By

Published : May 6, 2020, 5:17 PM IST

ಬೆಳ್ತಂಗಡಿ(ದ.ಕ): ಉಜಿರೆ-ಚಾರ್ಮಾಡಿ ಹೆದ್ದಾರಿಯಲ್ಲಿ ಕಾರು ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಮಗುವೊಂದು ಸಾವನ್ನಪ್ಪಿದ್ದು, ಉಳಿದ ಪ್ರಯಾಣಿಕರಿಗೆ ಗಾಯಗಳಾದ ಘಟನೆ ನಡೆದಿದೆ.

ಉಜಿರೆ ನಿವಾಸಿ ಪ್ರಮೋದ್ ಚಲಾಯಿಸುತ್ತಿದ್ದ ಇಕೋ ಕಾರು ನಿಯಂತ್ರಣ ತಪ್ಪಿ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಜನರಿಗೆ ಗಾಯಗಳಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಸಾಗಿಸುವ ದಾರಿ ಮಧ್ಯೆ ಮಗು ಸಾವನ್ನಪ್ಪಿದೆ. ಪ್ರಮೋದ್ ಹಾಗೂ ಅಶ್ವಿನಿ ಎಂಬುವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಾರು-ಲಾರಿ ನಡುವೆ ಡಿಕ್ಕಿ

ಮಮತಾ ಹಾಗೂ ಸಾತ್ವಿ ಎಂಬುವವರಿಗೆ ಉಜಿರೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಈ ಬಗ್ಗೆ ಬೆಳ್ತಂಗಡಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details