ಬಂಟ್ವಾಳ: ತಾಲೂಕಿನ ಸೂರಿಕುಮೇರು ಸಮೀಪ ದಾಸಕೋಡಿ ಎಂಬಲ್ಲಿ ನಡೆದ ಕಾರು ಅಪಘಾತದಲ್ಲಿ ತುಳು ನಟರಿಬ್ಬರು ಪವಾಡ ಸದೃಶವಾಗಿ ಪಾರಾಗಿದ್ದಾರೆ.
ಕಾರು ಅಪಘಾತದಲ್ಲಿ ತುಳು ಚಿತ್ರನಟರಿಬ್ಬರು ಪವಾಡ ಸದೃಶವಾಗಿ ಪಾರು - Bantwal accident News
ಬಂಟ್ವಾಳ ತಾಲೂಕಿನ ಸೂರಿಕುಮೇರು ಸಮೀಪ ದಾಸಕೋಡಿ ಎಂಬಲ್ಲಿ ಭಾನುವಾರ ಮಧ್ಯಾಹ್ನ ನಡೆದ ಕಾರು ಅಪಘಾತದಲ್ಲಿ ಇಬ್ಬರು ತುಳು ನಟರು ಪವಾಡ ಸದೃಶವಾಗಿ ಪಾರಾಗಿದ್ದಾರೆ.
![ಕಾರು ಅಪಘಾತದಲ್ಲಿ ತುಳು ಚಿತ್ರನಟರಿಬ್ಬರು ಪವಾಡ ಸದೃಶವಾಗಿ ಪಾರು Car accident](https://etvbharatimages.akamaized.net/etvbharat/prod-images/768-512-8270351-906-8270351-1596378542565.jpg)
ಕಾರು ಅಪಘಾತ
ಭಾನುವಾರ ಮಧ್ಯಾಹ್ನ ಘಟನೆ ನಡೆದಿದ್ದು, ಹಾಸ್ಯನಟ ಸುಂದರ ರೈ ಮಂದಾರ ಮತ್ತು ಚಂದ್ರಹಾಸ ಅನಂತಾಡಿ ಕಾರಿನಲ್ಲಿದ್ದರು. ಮಂಗಳೂರಿನಿಂದ ಮಾಣಿ ಕಡೆಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರು ಸಾಗುತ್ತಿದ್ದ ವೇಳೆ ಬಂಟ್ವಾಳ ತಾಲೂಕಿನ ಸೂರಿಕುಮೇರು ಸಮೀಪ ದಾಸಕೋಡಿಯಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಕಾರು ಪಕ್ಕದಲ್ಲಿದ್ದ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಈ ಸಂದರ್ಭ ಇಬ್ಬರಿಗೆ ಯಾವುದೇ ಗಾಯಗಳಾಗಿಲ್ಲ.
ಈ ಇಬ್ಬರು ನಟರು ತುಳು ನಾಟಕ ಹಾಗೂ ಸಿನಿಮಾಗಳಲ್ಲಿ ನಟಿಸುತ್ತಿದ್ದರು.