ದಕ್ಷಿಣ ಕನ್ನಡ: ಇಲ್ಲಿನ ರಾಷ್ಟ್ರೀಯ ಹೆದ್ದಾರಿ 75ರ ಉಪ್ಪಿನಂಗಡಿ ಸಮೀಪದ ಬೆದ್ರೋಡಿ ಎಂಬಲ್ಲಿ ನಿನ್ನೆ ಬೆಳಗ್ಗೆ ಸಂಭವಿಸಿದ ಅಪಘಾತದಲ್ಲಿ ಬ್ರದರ್ ಜಿತಿನ್ ಜೇಕಬ್ (28) ಮೃತಪಟ್ಟಿದ್ದಾರೆ.
ರಸ್ತೆ ಅಪಘಾತ: ಬ್ರದರ್ ಜಿತಿನ್ ಜೇಕಬ್ ಸೇರಿ ಇಬ್ಬರ ಸಾವು, ಒಬ್ಬ ಗಂಭೀರ - ದರ್ ಜಿತಿನ್ ಜೇಕಬ್
ರಾಷ್ಟ್ರೀಯ ಹೆದ್ದಾರಿ 75ರ ಉಪ್ಪಿನಂಗಡಿ ಸಮೀಪದ ಬೆದ್ರೋಡಿ ಎಂಬಲ್ಲಿ ನಿನ್ನೆ ಬೆಳಗ್ಗೆ ಸಂಭವಿಸಿದ ಅಪಘಾತದಲ್ಲಿ ಬ್ರದರ್ ಜಿತಿನ್ ಜೇಕಬ್ (28) ಸೇರಿ ಇಬ್ಬರು ಸಾವನ್ನಪ್ಪಿದ್ದು, ಮತ್ತೊಬ್ಬರು ಗಂಭೀರ ಗಾಯಗೊಂಡಿದ್ದಾರೆ.
![ರಸ್ತೆ ಅಪಘಾತ: ಬ್ರದರ್ ಜಿತಿನ್ ಜೇಕಬ್ ಸೇರಿ ಇಬ್ಬರ ಸಾವು, ಒಬ್ಬ ಗಂಭೀರ car accident in dakshina kannada](https://etvbharatimages.akamaized.net/etvbharat/prod-images/768-512-6016465-thumbnail-3x2-dik.jpg)
5 ವರ್ಷಗಳಿಂದ ಧರ್ಮಸ್ಥಳದ ಪ್ರಕೃತಿ ಚಿಕಿತ್ಸಾ ಕೇಂದ್ರದಲ್ಲಿ ವೈದ್ಯಕೀಯ ತರಬೇತಿ ಪಡೆಯುತ್ತಿದ್ದರು. ಅಷ್ಟೇ ಅಲ್ಲದೆ ಉತ್ತಮ ವಿದ್ಯಾರ್ಥಿಯೂ ಆಗಿದ್ದರು. ಜೊತೆಗ ಕ್ರೈಸ್ತ ಧರ್ಮ ಗುರುಗಳ ತರಬೇತಿಯನ್ನು ಪಡೆಯುತ್ತಿದ್ದರು. ಇಂದು ಬೆಳಗ್ಗೆ ವೈದ್ಯಕೀಯ ಶಿಬಿರದ ಕಾರ್ಯಕ್ರಮಕ್ಕೆ ತೆರಳುವಾಗ ಕಾರು ಟ್ಯಾಂಕರ್ಗೆ ಡಿಕ್ಕಿ ಹೊಡೆದಿದೆ. ಇವರ ಜೊತೆ ಪ್ರಯಾಣಿಸುತ್ತಿದ್ದ ಇಬ್ಬರಲ್ಲಿ ಒಬ್ಬರು ಮೃತಪಟ್ಟಿದ್ದು, ಮತ್ತೋರ್ವರಿಗೆ ಗಂಭೀರ ಗಾಯವಾಗಿದೆ.
ಅಂತಿಮ ದರ್ಶನದಲ್ಲಿ ವಿವಿಧ ಚರ್ಚ್ಗಳ ಧರ್ಮಗುರುಗಳು, ಧರ್ಮಭಗಿನಿಯರು, ರಾಜಕೀಯ, ಸಾಮಾಜಿಕ ಮುಖಂಡರು, ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಜನರು ಆಗಮಿಸಿದ್ದರು.