ಕರ್ನಾಟಕ

karnataka

ETV Bharat / state

"ಸಿದ್ದರಾಮಯ್ಯ ವಿರೋಧ ಪಕ್ಷದ ನಾಯಕರಾಗುವ ಸಾಮರ್ಥ್ಯ ಕಳೆದುಕೊಂಡಿದ್ದಾರೆ" - captain ganesh karnik news

ತೇಜಸ್ವಿ ಸೂರ್ಯ ಅವರು ಬೆಡ್ ಬ್ಲಾಕಿಂಗ್ ದಂಧೆಯನ್ನು ಬಯಲು ಮಾಡಿದ್ದನ್ನೇ ಖಂಡಿಸುತ್ತಿರುವ ಸಿದ್ದರಾಮಯ್ಯ ವಿರೋಧ ಪಕ್ಷದ ನಾಯಕರಾಗಿ ಕೆಲಸ ಮಾಡುವ ಸಾಮರ್ಥ್ಯ ಕಳೆದುಕೊಂಡಿದ್ದಾರೆ ಅನಿಸುತ್ತಿದೆ ಎಂದು ಬಿಜೆಪಿ ರಾಜ್ಯ ವಕ್ತಾರ ಕ್ಯಾ. ಗಣೇಶ್ ಕಾರ್ಣಿಕ್ ಆರೋಪಿಸಿದ್ದಾರೆ.

ganesh
ganesh

By

Published : May 5, 2021, 4:33 PM IST

Updated : May 5, 2021, 8:49 PM IST

ಮಂಗಳೂರು: ತೇಜಸ್ವಿ ಸೂರ್ಯ ಅವರು ಬೆಡ್ ಬ್ಲಾಕಿಂಗ್ ದಂಧೆಯನ್ನು ಬಯಲಿಗೆಳೆದ ಬಳಿಕ ಮಾಜಿ ಸಿಎಂ ಸಿದ್ದರಾಮಯ್ಯ ಸರಣಿ ಟ್ವೀಟ್ ಮಾಡಿರುವುದು ನೋಡಿದಾಗ, ಸಮರ್ಥ ವಿರೋಧ ಪಕ್ಷದ ನಾಯಕರಾಗಿ ಕೆಲಸ ಮಾಡುವಂತಹ ಸಾಮರ್ಥ್ಯವನ್ನು ಅವರು ಕಳೆದುಕೊಂಡಿದ್ದಾರೆಂಬ ಭಾಸವಾಗುತ್ತದೆ‌ ಎಂದು ಬಿಜೆಪಿ ರಾಜ್ಯ ವಕ್ತಾರ ಕ್ಯಾ. ಗಣೇಶ್ ಕಾರ್ಣಿಕ್ ಹೇಳಿದ್ದಾರೆ.

ಕೇವಲ ಮೊಸರಿನಲ್ಲಿ ಕಲ್ಲು ಹುಡುಕುವುದೇ ಸಿದ್ದರಾಮಯ್ಯನವರ ಸ್ವಭಾವವೇ ಅಥವಾ ಇದೇ ಅವರ ಜವಾಬ್ದಾರಿಯೇ ಎಂದು ಪ್ರಶ್ನಿಸಿರುವ ಕ್ಯಾ. ಗಣೇಶ್ ಕಾರ್ಣಿಕ್, ತಮ್ಮಿಂದ ಮಾಡಲು ಸಾಧ್ಯವಾಗದಿರೋದನ್ನು ಯುವ ಸಂಸದನೋರ್ವ ನಾಲ್ಕಾರು ದಿನಗಳ ಪ್ರಯತ್ನಗಳ ಬಳಿಕ ಕಷ್ಟಪಟ್ಟು ಪತ್ತೆಹಚ್ಚಿದ್ದಾರೆ. ಇಂತಹ ಕೃತ್ಯವನ್ನು ಬಯಲಿಗೆಳೆದಿರುವುದನ್ನೇ ಖಂಡಿಸುತ್ತಿರುವುದನ್ನು ನೋಡಿದಾಗ ಕಾಂಗ್ರೆಸ್ ಈ ಷಡ್ಯಂತ್ರದ ಒಂದು ಭಾಗವೇ ಅಥವಾ ಬಿಜೆಪಿಯ ಇಮೇಜ್ ಕೆಡಿಸಲು ಬೆಡ್​ಗಳ ಕೃತಕ ಅಭಾವವನ್ನು ಸೃಷ್ಟಿ ಮಾಡಲಾಗಿದೆಯೇ ಎಂಬಂತಹ ಸಂಶಯ ಮೂಡಲು ಆರಂಭವಾಗಿದೆ ಎಂದು ಹೇಳಿದರು.

"ಸಿದ್ದರಾಮಯ್ಯ ವಿರೋಧ ಪಕ್ಷದ ನಾಯಕರಾಗುವ ಸಾಮರ್ಥ್ಯ ಕಳೆದುಕೊಂಡಿದ್ದಾರೆ"

ಕೃತಕ ಬೆಡ್ ಅಭಾವ ದಂಧೆಯಲ್ಲಿ ತೊಡಗಿಕೊಂಡವರಲ್ಲಿ ಒಂದೇ ಕೋಮಿಗೆ ಸೇರಿದ 10 ರಿಂದ 15 ಹೆಸರುಗಳನ್ನು ಉಲ್ಲೇಖಿಸಲಾಗಿದೆ. ಆದರೆ ಸಿದ್ದರಾಮಯ್ಯನವರು ಆ ಜಾತಿಯನ್ನು ಎತ್ತಿ ಹಿಡಿಯುವ ಮೂಲಕ ಆ ಸಮುದಾಯಕ್ಕೇ ಅಪಪ್ರಚಾರ ಮಾಡುತ್ತಿದ್ದಾರೆ. ಸಿದ್ದರಾಮಯ್ಯನವರು ಸಿಎಂ ಆಗಿದ್ದವರು, ಅಪಾರ ರಾಜಕೀಯ ಅನುಭವ ಹೊಂದಿದವರು. ಅವರ ಈ ಅನುಭವವನ್ನು ರಾಜ್ಯ ಸರಕಾರದೊಂದಿಗೆ ಹಂಚಿಕೊಂಡು ವೈದ್ಯಕೀಯ ವ್ಯವಸ್ಥೆಗಳಲ್ಲಿ ಯಾವ ರೀತಿ ಮಾರ್ಪಾಡು ಮಾಡಬೇಕು ಎಂಬ ಸಲಹೆ ನೀಡುವುದನ್ನು ಬಿಟ್ಟು, ತಪ್ಪು ಹುಡುಕುವುದು ಮಾತ್ರ ವಿರೋಧಪಕ್ಷದ ನಾಯಕನ ಕೆಲಸ ಎಂಬಂತೆ ವರ್ತಿಸೋದು ತೀರಾ ಖಂಡನೀಯ ಎಂದು ಗಣೇಶ್ ಕಾರ್ಣಿಕ್ ಹೇಳಿದರು.

ಈ ಸಂದರ್ಭದಲ್ಲಾದರೂ ಸಿದ್ದರಾಮಯ್ಯನವರು ಸಮುದಾಯಗಳ ನಡುವೆ ಒಡಕು ಹಬ್ಬಿಸಿ ಕೊಳಕು ರಾಜಕಾರಣ ಮಾಡುವ ತಮ್ಮ ನೀಚ ಪ್ರವೃತ್ತಿಯನ್ನು ಬಿಡಬೇಕು. ಸಿದ್ದರಾಮಯ್ಯರಲ್ಲಿ‌ ಕನಿಷ್ಠ ಸೌಜನ್ಯವಾದರೂ ಇರುತ್ತಿದ್ದರೆ, ಬೆಡ್ ಬ್ಲಾಕಿಂಗ್ ದಂಧೆಯನ್ನು ಬಯಲಿಗೆಳೆದ ತೇಜಸ್ವಿ ಸೂರ್ಯರನ್ನು ಅಭಿನಂದಿಸಬೇಕಿತ್ತು. ಆದರೆ ಸಿದ್ದರಾಮಯ್ಯನವರು ತೇಜಸ್ವಿ ಸೂರ್ಯರ ವಿರುದ್ಧವೇ ಸರಣಿ ಟ್ವೀಟ್ ಮಾಡಿರುವುದನ್ನು ಕಂಡಾಗ, ಇದು ಅವರ ಕೀಳುಮಟ್ಟದ ಅಭಿರುಚಿ ಹಾಗೂ ಕನಿಷ್ಠ ವ್ಯಕ್ತಿತ್ವವನ್ನು ಪ್ರತಿಬಿಂಬಿಸುತ್ತದೆ. ಇದನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ. ಅಲ್ಲದೆ ಇಂತಹ ಕಾಳಸಂತೆ ದಂಧೆಯನ್ನು ಮಟ್ಟಹಾಕಲು ಸಿಎಂ ಯಡಿಯೂರಪ್ಪನವರು ಅತ್ಯಂತ ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕು ಎಂದು ಕ್ಯಾ.ಗಣೇಶ್ ಕಾರ್ಣಿಕ್ ಹೇಳಿದರು.

Last Updated : May 5, 2021, 8:49 PM IST

ABOUT THE AUTHOR

...view details