ಕರ್ನಾಟಕ

karnataka

ETV Bharat / state

ಕೇಂದ್ರ ಸರ್ಕಾರದ ನೀತಿಗಳಿಂದ ಆರ್ಥಿಕ ಬಿಕ್ಕಟ್ಟು ಸೃಷ್ಟಿ: ಮಂಜ್ರೇಕರ್ - ಮಂಗಳೂರಿನಲ್ಲಿ ಬ್ಯಾಂಕ್ ವಿಲೀನ ಖಂಡಿಸಿ ಪ್ರತಿಭಟನೆ

ಕೇಂದ್ರದ ಬ್ಯಾಂಕ್​ಗಳ ವಿಲೀನ ಕ್ರಮ ಹಾಗೂ ಆರ್ಥಿಕ ನೀತಿಗಳಿಂದ ಸೃಷ್ಠಿಯಾಗಿರುವ ಬಿಕ್ಕಟ್ಟನ್ನು ವಿರೋಧಿಸಿ ವಿವಿಧ ಸಂಘಟನೆಗಳು ನಗರದ ಪಾಂಡೇಶ್ವರ ಕಾಪೋರೇಷನ್ ಬ್ಯಾಂಕ್​ ವರೆಗೆ ಕ್ಯಾಂಡಲ್ ಮೆರವಣಿಗೆ ನಡೆಸಿದರು.

ಕೇಂದ್ರದ ಬ್ಯಾಂಕ್​ಗಳ ವಿಲೀನ ಕ್ರಮ ಹಾಗೂ ಆರ್ಥಿಕ ನೀತಿ ವಿರೋಧಿಸಿ ಕ್ಯಾಂಡಲ್ ಮೆರವಣಿಗೆ

By

Published : Oct 19, 2019, 3:54 PM IST

ಮಂಗಳೂರು:ಕೇಂದ್ರ ಸರ್ಕಾರದ ಆರ್ಥಿಕ ನೀತಿಗಳಿಂದಾಗಿ ಜಿಡಿಪಿ ಕುಸಿಯುತ್ತಿದೆ. ಆರ್ಥಿಕ ಬಿಕ್ಕಟ್ಟು ಹೆಚ್ಚಾಗುತ್ತಿದ್ದರೂ ಪ್ರಧಾನಿ ಮೋದಿ ಅವರು ದೇಶದಲ್ಲಿ ಎಲ್ಲವೂ ಸರಿಯಾಗಿದೆ ಎಂದು ಅಮೆರಿಕಾದ ಹೌಡಿ ಕಾರ್ಯಕ್ರಮದಲ್ಲಿ ಹೊಗಳಿ ಬಂದಿದ್ದಾರೆ ಎಂದು ಎಐಒಪಿ ಮುಖಂಡ ಅಜಯ್ ಮಂಜ್ರೇಕರ್ ಆಕ್ರೋಶ ವ್ಯಕ್ತಪಡಿಸಿದರು.

ಕೇಂದ್ರದ ಬ್ಯಾಂಕ್​ಗಳ ವಿಲೀನ ಕ್ರಮ ಹಾಗೂ ಆರ್ಥಿಕ ನೀತಿ ವಿರೋಧಿಸಿ ಕ್ಯಾಂಡಲ್ ಮೆರವಣಿಗೆ

ಬ್ಯಾಂಕ್​ಗಳ ವಿಲೀನ ವಿರೋಧಿಸಿ ವಿವಿಧ ಸಂಘಟನೆಗಳು ಜಂಟಿಯಾಗಿ ನಗರದ ಪುರಭವನದಿಂದ ಪಾಂಡೇಶ್ವರದ ಕಾರ್ಪೊರೇಷನ್ ಬ್ಯಾಂಕ್​ವರೆಗೆ ಹಮ್ಮಿಕೊಂಡಿದ್ದ ಕ್ಯಾಂಡಲ್ ಮೆರವಣಿಗೆ ಉದ್ದೇಶಿಸಿ ಅವರು ಮಾತನಾಡಿದರು.

ಜುಲೈ 19ರಂದು ರಾಷ್ಟ್ರೀಕರಣದ ಸುವರ್ಣ ಸಂಭ್ರಮವನ್ನು ಆಚರಿಸಿದ್ದೆವು. ಇದಾಗಿ ಒಂದೂವರೆ ತಿಂಗಳಲ್ಲಿ ವಿತ್ತ ಸಚಿವರು 10 ಬ್ಯಾಂಕ್​ಗಳನ್ನು ವಿಲೀನ ಮಾಡಿ, ನಾಲ್ಕು ಬ್ಯಾಂಕ್​ಗಳು ಉಳಿಯುತ್ತವೆ ಎಂದು ಘೋಷಣೆ ಮಾಡಿದ್ದಾರೆ ಎಂದು ಹೇಳಿದರು.

ಡಾ.ಶ್ರೀನಿವಾಸ ಕಕ್ಕಿಲ್ಲಾಯ ಮಾತನಾಡಿ, ಬ್ಯಾಂಕ್​ ವಿಲೀನದಿಂದ ಬ್ಯಾಂಕಿಂಗ್​​ ಉದ್ಯಮ ಧೂಳಿಪಟ ಮಾಡಲಾಗುತ್ತಿದೆ. ಆರ್ಥಿಕ ಅಭದ್ರತೆ ಸೃಷ್ಟಿಸಿರುವ ಸರ್ಕಾರವನ್ನು ಕಿತ್ತೊಗೆಯಬೇಕು ಎಂದು ಕರೆ ನೀಡಿದರು.ಈ ಸಂದರ್ಭ ವಿವಿಧ ಬ್ಯಾಂಕ್​ಗಳ ಅಧಿಕಾರಿಗಳು, ನೌಕರರು ಸೇರಿ ಮೂರು ಸಾವಿರಕ್ಕೂ ಅಧಿಕ ಜನರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.

For All Latest Updates

TAGGED:

ABOUT THE AUTHOR

...view details