ಕರ್ನಾಟಕ

karnataka

ETV Bharat / state

ಅನಧಿಕೃತವಾಗಿ ಮಾಂಸ ಮಾರಾಟ ಮಾಡಿದರೆ ಪರವಾಗಿ ರದ್ದು: ಮೇಯರ್ ಆದೇಶ - ಕಸಾಯಿಖಾನೆ

ಅನಧಿಕೃತವಾಗಿ ಮಾಂಸ ಮಾರಾಟ ಮಾಡಿರುವುದು ಕಂಡು ಬಂದಲ್ಲಿ ಅಂಗಡಿಯ ಪರವಾನಗಿ ರದ್ದುಪಡಿಸಲಾಗುತ್ತದೆ ಎಂದು ಮಂಗಳೂರು ಮನಪಾ ಮೇಯರ್ ದಿವಾಕರ ಪಾಂಡೇಶ್ವರ ತಿಳಿಸಿದ್ದಾರೆ.

ದಿವಾಕರ ಪಾಂಡೇಶ್ವರ
ದಿವಾಕರ ಪಾಂಡೇಶ್ವರ

By

Published : Oct 24, 2020, 12:09 PM IST

ಮಂಗಳೂರು: ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ 20 ಬೀಫ್ ಸ್ಟಾಲ್​​ಗಳಲ್ಲಿ ಬೇರೆ ರಾಜ್ಯ, ಜಿಲ್ಲೆಗಳಿಂದ ಮಾಂಸ ತಂದು ಮಾರಾಟ ಮಾಡದಂತೆ ಮಾಲೀಕರು ಕ್ರಮ ಕೈಗೊಳ್ಳಬೇಕು. ಅನಧಿಕೃತವಾಗಿ ಮಾರಾಟ ಮಾಡಿರುವುದು ಕಂಡು ಬಂದಲ್ಲಿ ಪರವಾನಗಿ ರದ್ದುಪಡಿಸಲಾಗುತ್ತದೆ ಎಂದು ಮಂಗಳೂರು ಮನಪಾ ಮೇಯರ್ ದಿವಾಕರ ಪಾಂಡೇಶ್ವರ ಆದೇಶಿಸಿದ್ದಾರೆ.

ಪ್ರಸ್ತುತ ಹೊರ ರಾಜ್ಯ ಮತ್ತು ಜಿಲ್ಲೆಗಳಿಂದ ಗೋಮಾಂಸ ತಂದು ಮಾರಾಟ ಮಾಡುತ್ತಿರುವ ಕುರಿತು ಸಾರ್ವಜನಿಕರಿಂದ ದೂರುಗಳು ಕೇಳಿ ಬಂದಿದೆ. ಆದ್ದರಿಂದ ಪಾಲಿಕೆ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಮಾಂಸದಂಗಡಿಯವರು ಇನ್ನು ಮುಂದೆ ಪಾಲಿಕೆಯ ಅಧೀನದಲ್ಲಿರುವ ಅಧಿಕೃತ ಕಸಾಯಿಖಾನೆಯಿಂದಲೇ ಮಾಂಸವನ್ನು ಪಡೆದು ಮಾರಾಟ ಮಾಡಬೇಕು. ಜೊತೆಗೆ ಕಸಾಯಿಖಾನೆಯಿಂದ ಪಡೆದ ರಶೀದಿಯನ್ನು ಕಡ್ಡಾಯವಾಗಿ ಇರಿಸಿಕೊಳ್ಳಬೇಕು ಎಂದರು.

ಕಸಾಯಿಖಾನೆಗೆ ಪ್ರಾಣಿಗಳನ್ನು ಕೊಂಡೊಯ್ಯುವಾಗ ಆರ್.ಟಿ.ಒ.ದಿಂದ ಅಧಿಕೃತವಾಗಿ ನೋಂದಣಿಗೊಂಡ ವಿಶೇಷ ಪರವಾನಗಿ ವಾಹನ (ಎಸ್.ಪಿ.ವಿ)ದಲ್ಲೇ ಸಾಗಿಸುವಂತೆ ಕಸಾಯಿಖಾನೆ ಮಾಲೀಕರು ಕ್ರಮ ಕೈಗೊಳ್ಳಬೇಕು ಎಂದು ಮೇಯರ್ ದಿವಾಕರ ಪಾಂಡೇಶ್ವರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ABOUT THE AUTHOR

...view details