ಕರ್ನಾಟಕ

karnataka

ETV Bharat / state

ಸಾಲದ ಕಂತಿಗೆ ಜಮೆ ಮಾಡಿದ್ದ ಕೊರೊನಾ ಪರಿಹಾರದ ಹಣ ಹಿಂದಿರುಗಿಸಿದ ಕೆನರಾ ಬ್ಯಾಂಕ್ - ರೀ ಷೆಡ್ಯೂಲ್ ಅವಕಾಶ

ಆಟೋ ಚಾಲಕ ಬಶೀರ್ ಸಾಮಾಜಿಕ ಜಾಲತಾಣದಲ್ಲಿ ಕೆನರಾ ಬ್ಯಾಂಕ್​ ಆಡಳಿತದ ನಡೆಯ ಕುರಿತು ಮಾಹಿತಿ ಬಿಚ್ಚಿಟ್ಟಿದ್ದರು. ಬ್ಯಾಂಕ್​ನ ವರ್ತನೆಗೆ ನೆಟ್ಟಿಗರು ಕಟು ಟೀಕೆ ವ್ಯಕ್ತಪಡಿಸಿದ್ದರು. ಈ ಕುರಿತು ದೊಡ್ಡ ಚರ್ಚೆಯನ್ನೇ ಅದು ಹುಟ್ಟುಹಾಕಿತು. ಯೂನಿಯನ್ ಪದಾಧಿಕಾರಿಗಳು ಬಶೀರ್​ಗೆ ಹಾಗೂ ಈ ರೀತಿ ಸಂಕಷ್ಟಕ್ಕೆ ಸಿಲುಕಿದವರಿಗೆ ಪರಿಹಾರದ (ರೀ ಷೆಡ್ಯೂಲ್ ಅವಕಾಶದ) ದಾರಿಗಳನ್ನು ವಿವರಿಸಿದರು. ಇದರಿಂದ ಎಚ್ಚೆತ್ತ ಕೆನರಾ ಬ್ಯಾಂಕ್, ಸರಕಾರದ ಪರಿಹಾರ ಧನ ಮೂರು ಸಾವಿರ ರೂ.ಗಳನ್ನು ಬಶೀರ್ ಖಾತೆಗೆ ಮರಳಿಸಿದೆ.

canara-bank-returned-auto-driver-home-loan
ಆಟೋ ಚಾಲಕ ಬಶೀರ್

By

Published : Jun 24, 2021, 10:04 PM IST

ಮಂಗಳೂರು: ಬಡ ಆಟೊ ಚಾಲಕನೋರ್ವನ ಮನೆ ಸಾಲದ ಕಂತಿಗಾಗಿ ಕೊರೊನಾ ಪರಿಹಾರವೆಂದು ಸರಕಾರ ನೀಡಿರುವ 3 ಸಾವಿರ ರೂ. ಸಹಿತ ಬ್ಯಾಂಕ್ ಖಾತೆಯಲ್ಲಿದ್ದ 2,700ನ್ನೂ ತೆಗೆದುಕೊಂಡಿದ್ದ ಕೆನರಾ ಬ್ಯಾಂಕ್ ಇದೀಗ 3 ಸಾವಿರ ರೂ.ಗಳನ್ನು ಮರಳಿ ಅವರ ಖಾತೆಗೆ ಜಮೆ ಮಾಡಿದೆ.

ಸುರತ್ಕಲ್ ಸೂರಿಂಜೆ ನಿವಾಸಿ ಆಟೋ ಚಾಲಕ ಬಶೀರ್ ಮನೆ ಸಾಲದ ಮೇ ತಿಂಗಳ ಕಂತು ಕಟ್ಟಲು ಲಾಕ್ ಡೌನ್, ಕೊರೊನಾ ಬಿಕ್ಕಟ್ಟಿನಿಂದಾಗಿ ಅಸಾಧ್ಯವಾಗಿತ್ತು. ಸಾಲಕೊಟ್ಟ ಕೆನರಾ ಬ್ಯಾಂಕ್ ಬೈಕಂಪಾಡಿ ಬ್ರಾಂಚ್​ನ ಅಧಿಕಾರಿಗಳಲ್ಲಿ ಮೂರ್ನಾಲ್ಕು ತಿಂಗಳು ಕಂತು ಪಾವತಿಗೆ ವಿನಾಯತಿ ಕೇಳಿದ್ದರು. ಅಲ್ಲಿ ಸಕಾರಾತ್ಮಕ ಸ್ಪಂದನೆ ಸಿಗದೆ ಅವರ ಖಾತೆಯಲ್ಲಿದ್ದ 2700 ರೂ. ಹಾಗೂ ಆಟೋ ಚಾಲಕರಿಗೆ ಕೊರೊನಾ ಪರಿಹಾರವಾಗಿ ಸರಕಾರ ನೀಡಿದ 3 ಸಾವಿರ ರೂ‌.ವನ್ನು ಬ್ಯಾಂಕ್ ಸಾಲಕ್ಕೆ ಜಮಾ ಮಾಡಿಕೊಂಡಿತ್ತು.

ಈ ಕುರಿತು ಆಟೋ ಚಾಲಕ ಬಶೀರ್ ಸಾಮಾಜಿಕ ಜಾಲತಾಣದಲ್ಲಿ ಕೆನರಾ ಬ್ಯಾಂಕ್​ ಆಡಳಿತದ ನಡೆಯ ಕುರಿತು ಮಾಹಿತಿ ಬಿಚ್ಚಿಟ್ಟಿದ್ದರು. ಬ್ಯಾಂಕ್​ನ ವರ್ತನೆಗೆ ನೆಟ್ಟಿಗರು ಕಟು ಟೀಕೆ ವ್ಯಕ್ತಪಡಿಸಿದ್ದರು. ಈ ಕುರಿತು ದೊಡ್ಡ ಚರ್ಚೆಯನ್ನೇ ಅದು ಹುಟ್ಟುಹಾಕಿತು. ಯೂನಿಯನ್ ಪದಾಧಿಕಾರಿಗಳು ಬಶೀರ್​ಗೆ ಹಾಗೂ ಈ ರೀತಿ ಸಂಕಷ್ಟಕ್ಕೆ ಸಿಲುಕಿದವರಿಗೆ ಪರಿಹಾರದ (ರೀ ಷೆಡ್ಯೂಲ್ ಅವಕಾಶದ) ದಾರಿಗಳನ್ನು ವಿವರಿಸಿದರು.

ಇದರಿಂದ ಎಚ್ಚೆತ್ತ ಕೆನರಾ ಬ್ಯಾಂಕ್, ಸರಕಾರದ ಪರಿಹಾರ ಧನ ಮೂರು ಸಾವಿರ ರೂ.ಗಳನ್ನು ಬಶೀರ್ ಖಾತೆಗೆ ಮರಳಿಸಿದೆ. ರೀಷೆಡ್ಯೂಲ್ ಆಫರನ್ನೂ ನೀಡಿದೆ. ಈ ಮಾಹಿತಿ ಇಲ್ಲದ ಉಳಿದ ದೊಡ್ಡ ಸಂಖ್ಯೆಯ ಸಾಲಗಾರರಿಗೂ ಇದರ ಲಾಭ ಸಿಕ್ಕಿದೆ. ಸರಕಾರ ಪರಿಹಾರವಾಗಿ ನೀಡಿದ ಮೊತ್ತವನ್ನು ಸಾಲಕ್ಕೆ ಮುರಿಯುವ ಕೆಟ್ಟ ಕ್ರಮಕ್ಕೂ ಕಡಿವಾಣ ಬಿದ್ದಿದೆ.

ABOUT THE AUTHOR

...view details