ಪುತ್ತೂರು:ಪೌರತ್ವ ಕಾಯಿದೆ ವಿರೋಧಿಸಿ ಫೆ.8 ಮತ್ತು 9ರಂದು ಪುತ್ತೂರು ತಾಲೂಕು ಫ್ರೀಡಂ ಕಮ್ಯೂನಿಟಿ ಸಭಾ ಭವನ ಮಿತ್ತೂರು ಎಂಬಲ್ಲಿ ರಾಜ್ಯಪ್ರತಿನಿಧಿ ಸಭೆ ನಡೆಯಲಿದೆ ಎಂದು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ ರಾಜ್ಯ ಕಾರ್ಯದರ್ಶಿ ಅಶ್ವಾನ್ ಸಾದಿಕ್ ತಿಳಿಸಿದರು.
ಪೌರತ್ವ ಕಾಯಿದೆ ವಿರೋಧಿಸಿ ಫೆ.8-9ರಂದು ಪುತ್ತೂರಿನಲ್ಲಿ ರಾಜ್ಯಪ್ರತಿನಿಧಿ ಸಭೆ - ಪೌರತ್ವ ಕಾಯಿದೆ
ಫೆ.8 ಮತ್ತು 9ರಂದು ಪುತ್ತೂರಿನಲ್ಲಿ ಪೌರತ್ವ ಕಾಯಿದೆ ವಿರೋಧಿಸಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ ನೇತೃತ್ವದಲ್ಲಿ ರಾಜ್ಯಪ್ರತಿನಿಧಿ ಸಭೆ ನಡೆಯಲಿದೆ.
ರಾಜ್ಯಪ್ರತಿನಿಧಿ ಸಭೆ
ಈ ಕುರಿತು ಮಾತನಾಡಿದ ಅವರು, ಈ ಪ್ರತಿನಿಧಿ ಸಭೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಹಾಗೂ ವಿಶ್ವವಿದ್ಯಾಲಯಗಳಿಂದ ಸುಮಾರು 450 ಮಂದಿ ಪ್ರತಿನಿಧಿಗಳು ಭಾಗಿಯಾಗಲಿದ್ದಾರೆ. ಪೌರತ್ವ ತಿದ್ದುಪಡಿ ಕಾಯಿದೆಯ ಮುಂದಿನ ಹೋರಾಟ, ರಾಷ್ಟ್ರೀಯ ಶಿಕ್ಷಣ ನೀತಿ, ಬೀದರಿನ ಸಂಸ್ಥೆ ಮೇಲೆ ಹಾಕಿರುವ ದೇಶದ್ರೋಹದ ಪ್ರಕರಣ, ಮಂಗಳೂರಿನ ಪೊಲೀಸ್ ಗೋಲಿಬಾರ್ ಮತ್ತಿತರ ವಿಚಾರಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಲಿದೆ ಎಂದು ತಿಳಿಸಿದರು.