ಕರ್ನಾಟಕ

karnataka

By

Published : Jun 7, 2019, 1:56 AM IST

ETV Bharat / state

ಕೃಷಿ ಸೇವೆಯಲ್ಲಿ ದಾಖಲೆ ನಿರ್ಮಿಸಿದ ಕ್ಯಾಂಪ್ಕೊ ಸಹಕಾರಿ ಸಂಸ್ಥೆ

ಕ್ಯಾಂಪ್ಕೊ ಸಂಸ್ಥೆ 1878 ಕೋಟಿ ರೂ‌.ಗಳ ವ್ಯವಹಾರ ನಡೆಸುವ ಮೂಲಕ ಕೃಷಿ ಸೇವೆಯಲ್ಲಿ ದಾಖಲೆ ನಿರ್ಮಿಸಿದೆ.

ಸುದ್ದಿಗೋಷ್ಟಿ

ಮಂಗಳೂರು: ಕ್ಯಾಂಪ್ಕೊ ಸಹಕಾರಿ ಸಂಸ್ಥೆ 2018-19 ನೇ ಸಾಲಿನಲ್ಲಿ 1878 ಕೋಟಿ ರೂ‌.ಗಳ ವ್ಯವಹಾರ ನಡೆಸುವ ಮೂಲಕ ತನ್ನ 46 ವರ್ಷಗಳ ಕೃಷಿಕರ ಸೇವೆಯಲ್ಲಿ ದಾಖಲೆಯನ್ನು ನಿರ್ಮಿಸಿದೆ.

ಅಲ್ಲದೆ ಅಡಿಕೆ ಖರೀದಿ ಹಾಗೂ ಮಾರಾಟ ಪ್ರಮಾಣದಲ್ಲಿ ಹೆಚ್ಚಳವನ್ನು ಸಾಧಿಸಿದೆ ಎಂದು ಕ್ಯಾಂಪ್ಕೊ ಸಹಕಾರಿ ಸಂಸ್ಥೆಯ ಅಧ್ಯಕ್ಷ ಎಸ್.ಆರ್. ಸತೀಶ್ಚಂದ್ರ ತಿಳಿಸಿದ್ದಾರೆ.

ಸುದ್ದಿಗೋಷ್ಟಿಯಲ್ಲಿ ಮಾತನಾಡುತ್ತಿರುವ ಕ್ಯಾಂಪ್ಕೊ ಸಹಕಾರಿ ಸಂಸ್ಥೆಯ ಅಧ್ಯಕ್ಷ ಎಸ್.ಆರ್. ಸತೀಶ್ಚಂದ್ರ

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕಳೆದ ವರ್ಷ ನಾಲ್ಕು ತಿಂಗಳ ಕಾಲ ಸುರಿದಿದ್ದ ಮಳೆಯಿಂದಾಗಿ ರೈತರಿಗೆ ತೊಂದರೆಯಾಗಿತ್ತು. ಆಗ ರಿಯಾಯಿತಿ ದರದಲ್ಲಿ ಕ್ಯಾಂಪ್ಕೊ ಸಹಕಾರಿ ಸಂಸ್ಥೆ ಕಾಪರ್ ಸಲ್ಪೇಟನ್ನು ವಿತರಿಸಿತ್ತು. ಅಲ್ಲದೆ ಸೂಕ್ತ ಸಮಯದಲ್ಲಿ ಸದಸ್ಯ ಸಮಿತಿಗಳ ಪರವಾಗಿ ವಿವಿಧ ಶಾಖೆಗಳ ಮುಖಾಂತರ ಒದಗಿಸಿದ ಪರಿಣಾಮ ತುಂಬಾ ಪ್ರಮಾಣದ ಅಡಿಕೆಗಳನ್ನು ಉಳಿಸಿಕೊಳ್ಳಲು ಸಾಧ್ಯವಾಗಿದೆ. ಆದರೂ ಒಂದಷ್ಟು ಅಡಿಕೆ ಕೊಳೆರೋಗದಿಂದ ನಾಶವಾಗಿದೆ. ಸುಮಾರು 142 ಮೆಟ್ರಿಕ್ ಟನ್ ಗಳಷ್ಟು ಕಾಪರ್ ಸಲ್ಪೇಟ್​ನ್ನು ರೈತರಿಗೆ ಒದಗಿಸಿದ್ದೇವೆ. ಕಾಪರ್ ಸಲ್ಪೇಟ್​ ಅಡಿಕೆ, ಕೊಕ್ಕೊ, ಕಾಳುಮೆಣಸು ಹಾಗೂ ರಬ್ಬರ್ ಇವೆಲ್ಲದಕ್ಕೂ ಅಗತ್ಯವಾಗಿ ಬೇಕಾದ ವಸ್ತುವಾದ ಕಾರಣ ಕ್ಯಾಂಪ್ಕೊ ಇದನ್ನು ಈ ವರ್ಷವೂ ವಿತರಿಸುತ್ತಿದೆ ಎಂದು ತಿಳಿಸಿದರು.

ಅಡಿಕೆ ಬೆಳೆಗಾರರಿಗೆ ಕೃಷಿ ಕಾರ್ಮಿಕರ ಕೊರತೆಯು ಕಳೆದ 3-4 ವರ್ಷಗಳಿಂದ ತಲೆದೋರಿದ ಬಹುದೊಡ್ಡ ಸಮಸ್ಯೆ. ಈ ಸಮಸ್ಯೆಗೆ ಸಿಪಿಸಿಆರ್​ಐ ಹಾಗೂ ಸಮಾನ ಮನಸ್ಕರ ಕೃಷಿ ಇಲಾಖೆ, ತೋಟಗಾರಿಕಾ ಇಲಾಖೆಗಳಿಂದ ನಾವು ಅಡಿಕೆ ಕೌಶಲ್ಯ ತರಬೇತಿಗಾಗಿ ಶಿಬಿರಗಳನ್ನು ನಡೆಸುತ್ತೇವೆ. ವಿಟ್ಲ ಸಿಪಿಆರ್​ಐ ಘಟಕದ ಮೂಲಕ ಎರಡು ತಂಡಗಳಿಗೆ ಅಡಿಕೆ ಕೊಯ್ಲು ತರಬೇತಿಯನ್ನು ನೀಡಲಾಗಿತ್ತು. ಬಳಿಕ ಪೆರ್ಲ ಹಾಗೂ ಪಂದಲ್ಲೆರಡು ತರಬೇತಿ ಸಂಸ್ಥೆಗಳನ್ನು ಪ್ರಾರಂಭಿಸಲಾಗುತ್ತಿದೆ. ಶುಕ್ರವಾರದಿಂದ ಉಡುಪಿಯ ಕಂಬದಕೋಣೆಯಲ್ಲಿ ಹಾಗೂ ಮುಂದಿನ ವಾರದಲ್ಲಿ ಶಿರಸಿಯಲ್ಲಿ ಈ ತರಬೇತಿ ಆರಂಭವಾಗುತ್ತದೆ. ನಾವು ರೈತಾಪಿ ಜನತೆ ಹಾಗೂ ಸಹಕಾರಿ ಸಂಸ್ಥೆ ಜೊತೆಗೂಡಿ ಉಂಟಾಗಿರುವ ಸಮಸ್ಯೆಗಳಿಗೆ ಪರಿಹಾರ ನೀಡಲಿದ್ದೇವೆ. ಇದು ಮುಂದಿನ ದಿನಗಳಲ್ಲಿ ಕೌಶಲ್ಯಾಭಿವೃದ್ಧಿಗೆ ಸಹಕಾರವಾಗಲಿದ್ದು, ಅಡಿಕೆ ಬೆಳೆಗಾರರಿಗೆ ಅನುಕೂಲ ಆಗುವಂತಹ ವ್ಯವಸ್ಥೆಯನ್ನು ಸಹ ಮಾಡಿದ್ದೇವೆ ಎಂದು ಕ್ಯಾಂಪ್ಕೊ ಅಧ್ಯಕ್ಷ ವಿವರಿಸಿದರು.

For All Latest Updates

TAGGED:

ABOUT THE AUTHOR

...view details