ಮಂಗಳೂರು: ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೋರ್ವ ಆರೋಪಿಯನ್ನು ಕದ್ರಿ ಪೊಲೀಸರು ಬಂಧಿಸಿದ್ದಾರೆ.
ಮಾಜಿ ಪ್ರಿಯಕರನಿಂದ ಹಲ್ಲೆ ಪ್ರಕರಣ: ಮತ್ತೊಬ್ಬನ ಬಂಧನ - mangalore crime news
ನಗರದ ಬೆಂದೂರ್ ವೆಲ್ ಹೋಟೆಲ್ವೊಂದರಲ್ಲಿ ಜ. 31ರಂದು ಜನ್ಮದಿನದ ಪಾರ್ಟಿ ಆಚರಿಸುತ್ತಿದ್ದ ಮಾಜಿ ಪ್ರೇಯಸಿ ಹಾಗೂ ಆಕೆಯ ಸ್ನೇಹಿತರಿಗೆ ಮಾಜಿ ಪ್ರಿಯಕರ ಹಾಗೂ ಆತನ ತಂಡ ಹೆಲ್ಮೆಟ್, ಚಾಕುವಿನಿಂದ ದಾಳಿ ನಡೆಸಿತ್ತು.
ಇದೀಗ ಪ್ರಕರಣದಲ್ಲಿ ಬಂಧಿತರ ಸಂಖ್ಯೆ ನಾಲ್ಕಕ್ಕೇರಿದೆ. ಅತ್ತಾವರದ ಸೌರಜ್ ಬಂಧಿತ ಆರೋಪಿ ಎಂದು ತಿಳಿದು ಬಂದಿದೆ. ನಗರದ ಬೆಂದೂರ್ ವೆಲ್ ಹೋಟೆಲ್ವೊಂದರಲ್ಲಿ ಜ. 31ರಂದು ಜನ್ಮದಿನದ ಪಾರ್ಟಿ ಆಚರಿಸುತ್ತಿದ್ದ ಮಾಜಿ ಪ್ರೇಯಸಿ ಹಾಗೂ ಆಕೆಯ ಸ್ನೇಹಿತರಿಗೆ ಮಾಜಿ ಪ್ರಿಯಕರ ಹಾಗೂ ಆತನ ತಂಡ ಹೆಲ್ಮೆಟ್, ಚಾಕುವಿನಿಂದ ದಾಳಿ ನಡೆಸಿತ್ತು.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತ್ರಿಶೂಲ್ ಸಾಲ್ಯಾನ್ ಸೇರಿ ಆತನ ತಂಡದಲ್ಲಿದ್ದ ಸಂತೋಷ್ ಪೂಜಾರಿ, ಡ್ಯಾನಿಷ್ ಅರೆನ್ ಡಿಕ್ರೂಸ್ ಎಂಬುವರನ್ನು ಈಗಾಗಲೇ ಬಂಧಿಸಲಾಗಿದೆ. ಇದೀಗ ಮತ್ತೋರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಈ ಪ್ರಕರಣದ ಹಿಂದೆ ಇನ್ನೂ ಹಲವರು ಇದ್ದಾರೆ. ಅವರನ್ನು ಶೀಘ್ರ ಬಂಧಿಸಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.