ಮಂಗಳೂರು: ಮಳೆಯಿಂದ ಮನೆ ಕಳೆದುಕೊಂಡ ಸಂತ್ರಸ್ತರಿಗೆ ಮನೆ ನಿರ್ಮಾಣದ ತನಕ 5 ಸಾವಿರ ತಿಂಗಳಿಗೆ ಬಾಡಿಗೆ ಹಣ ಮತ್ತು 5 ಲಕ್ಷ ಪರಿಹಾರ ನೀಡಲಾಗುವುದು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ತಿಳಿಸಿದ್ದಾರೆ.
ಮಳೆಗೆ ಮನೆ ಕಳೆದುಕೊಂಡವರಿಗೆ 5 ಸಾವಿರ ಬಾಡಿಗೆ ಸೇರಿ, ವಿವಿಧ ಪರಿಹಾರ ಘೋಷಿಸಿದ ಸಿಎಂ - 5 ಸಾವಿರ ತಿಂಗಳಿಗೆ ಬಾಡಿಗೆ ಹಣ ಮತ್ತು 5 ಲಕ್ಷ ಪರಿಹಾರ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಗೆ ಹಲವರು ಮನೆಗಳನ್ನೇ ಕಳೆದುಕೊಂಡಿದ್ದಾರೆ. ಇದೀಗ ಜಿಲ್ಲೆಗೆ ಭೇಟಿ ನೀಡಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸಂತ್ರ್ತರಿಗೆ 5 ಸಾವಿರ ರೂ. ಬಾಡಿಗೆ ಸೇರಿದಂತೆ ವಿವಿಧ ಪರಿಹಾರವನ್ನು ಘೋಷಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ನೆರೆ ಪೀಡಿತ ಪ್ರದೇಶ ಕುಕ್ಕಾವುನಲ್ಲಿ ಪ್ರವಾಹ ವೀಕ್ಷಣೆ ಮಾಡಿ ನೆರೆ ಸಂತ್ರಸ್ತರೊಂದಿಗೆ ಗಂಜಿ ಕೇಂದ್ರದಲ್ಲಿ ಮಾತುಕತೆ ನಡೆಸಿದ ಬಳಿಕ ಅವರು ಈ ಘೋಷಣೆ ಮಾಡಿದರು.
ಮಳೆಯಲ್ಲಿ ದ.ಕ ಜಿಲ್ಲೆಯ 285 ಮಂದಿ ಮನೆ ಕಳೆದುಕೊಂಡಿದ್ದು, ಅವರಿಗೆ ನಿವೇಶನದ ಜೊತೆ ಐದು ಲಕ್ಷ, ಭಾಗಶಃ ಮನೆ ಹಾನಿಯಾದವರಿಗೆ 1 ಲಕ್ಷ ಮತ್ತು ತಕ್ಷಣದ ಪರಿಹಾರವಾಗಿ ಮನೆ ಕಳೆದುಕೊಂಡ ಕುಟುಂಬಗಳಿಗೆ 10 ಸಾವಿರ ನೀಡಲಾಗುವುದು ಎಂದರು. ಕುಕ್ಕಾವು ಪ್ರದೇಶದಲ್ಲಿ ಸೇತುವೆ ಕುಸಿದು ಬಿದ್ದಿರುವುದನ್ನು ವೀಕ್ಷಿಸಿದ ಬಳಿಕ ಅವರು ಗಂಜಿ ಕೇಂದ್ರದಲ್ಲಿ ಸಂತ್ರಸ್ತರ ಜೊತೆಗೆ ಮಾತುಕತೆ ನಡೆಸಿದರು.
.