ಕರ್ನಾಟಕ

karnataka

ETV Bharat / state

ಜೆಡಿಎಸ್​​​ ಪಕ್ಷದ್ದು ಮಿಷನ್ 123 ಅಲ್ಲ, ಅದು ಬರೀ ಮಿಷನ್​ 23: ಬಿ.ವೈ.ವಿಜಯೇಂದ್ರ

ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಯಾತ್ರಾಸ್ಥಳ ಸುಬ್ರಹ್ಮಣ್ಯ ದೇಗುಲ ದರ್ಶನಕ್ಕೆಂದು ಆಗಮಿಸಿದ್ದ ಬಿಜಿಪಿ ಮುಖಂಡ ಬಿ.ವೈ.ವಿಜಯೇಂದ್ರ, ಮುಂಬರುವ ಚುನಾವಣೆಯಲ್ಲಿ ಸಂಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬರುವ ವಿಶ್ವಾಸ ವ್ಯಕ್ತಪಡಿಸಿದರು.

By

Published : Oct 7, 2021, 7:14 AM IST

by-vijayendra
ಬಿ.ವೈ ವಿಜಯೇಂದ್ರ

ಸುಬ್ರಹ್ಮಣ್ಯ (ದ.ಕ): 'ಜೆಡಿಎಸ್ ಪಕ್ಷದ್ದು ಮಿಷನ್ 123 ಅಲ್ಲ, ಅದು ಕೇವಲ ಮಿಷನ್ 23. ಅವರಿಗೆ ಎಷ್ಟು ಕಡಿಮೆ ಸೀಟ್ ಬರುತ್ತೋ ಅಷ್ಟು ಒಳ್ಳೆಯದು, ಏಕೆಂದರೆ ಅಧಿಕಾರವನ್ನು ಅವರವರೇ ಹಂಚಿಕೊಳ್ಳುತ್ತಾರೆ' ಎಂದು ಸುಬ್ರಹ್ಮಣ್ಯದಲ್ಲಿ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ವ್ಯಂಗ್ಯವಾಡಿದ್ದಾರೆ.

'ಕರ್ನಾಟಕದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳಲಿವೆ. ರಾಜ್ಯದ ಎರಡೂ ಉಪಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ. ಬಿಜೆಪಿಗೆ ಪ್ರತ್ಯೇಕ ಗೆಲುವಿನ ತಂತ್ರಗಳು ಎಂಬುದಿಲ್ಲ. ಕೇಂದ್ರದಲ್ಲಿ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಮಾಡಿರುವ ಜನಪರ ಕೆಲಸಗಳೇ ಪಕ್ಷದ ಗೆಲುವಿನ ತಂತ್ರ' ಎಂದರು.

'ಜೆಡಿಎಸ್​​​ದು ಮಿಷನ್ 123 ಅಲ್ಲ ಅದು ಬರೀ ಮಿಷನ್​ 23'

ಜೊತೆಗೆ, 'ಯಡಿಯೂರಪ್ಪ ಅವರು ಯಾವುದೇ ಅಧಿಕಾರಕ್ಕಾಗಿಯೂ ಹೋರಾಟ ಮಾಡಿದವರಲ್ಲ. ಬಡವರು ಮತ್ತು ರೈತರ ಧ್ವನಿಯಾಗಿ ಅವಿರತವಾಗಿ ಕೆಲಸ ಮಾಡಿದ್ದಕ್ಕಾಗಿ ಅಧಿಕಾರ ಅವರನ್ನು ಹುಡುಕಿಕೊಂಡು ಬಂದಿದೆ. ಅವರಿಗೆ ಇಂದಿಗೂ ನಿರ್ದಿಷ್ಟವಾದ ಗುರಿ ಇದೆ' ಎಂದು ಹೇಳಿದರು.

ಕುಕ್ಕೆ ಸುಬ್ರಹ್ಮಣ್ಯದ ವಿವಿಐಪಿ ಗೆಸ್ಟ್ ಹೌಸ್​ನಲ್ಲಿ ಬಿಜೆಪಿ ಕಾರ್ಯಕರ್ತರು, ಪಕ್ಷದ ಪ್ರಮುಖರ ಜೊತೆಗೆ ಸಭೆ ನಡೆಸಿ ಪಕ್ಷ ಸಂಘಟನೆಯ ಬಗ್ಗೆ ಚರ್ಚಿಸಿದರು. ಬಳಿಕ ಕ್ಷೇತ್ರದಲ್ಲಿ ದೇವರ ದರ್ಶನ ಪಡೆದರು.

ಇದನ್ನೂ ಓದಿ:ಕೊರಗಜ್ಜನ ಕಟ್ಟೆಗೆ ಭೇಟಿ ನೀಡಿ ಹರಕೆ ತೀರಿಸಿದ ನಟಿ ರಕ್ಷಿತಾ ಪ್ರೇಮ್

ABOUT THE AUTHOR

...view details