ಬಂಟ್ವಾಳ (ದ.ಕ.):ಎಲ್ಲಾ ಸಮುದಾಯಗಳಂತೆ ಬ್ರಾಹ್ಮಣ ಸಮುದಾಯದ ಅರ್ಚಕರ ಸಹಾಯಕರು, ಅಡುಗೆ ಸಹಾಯಕರು, ಅಡುಗೆಯವರು ಸಹ ಲಾಕ್ಡೌನ್ನಿಂದ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಇಂತಹ ಸುಮಾರು 100 ಮಂದಿಯನ್ನು ಆಯ್ದು ಅವರಿಗೆ ಧನಸಹಾಯ ಒದಗಿಸಿ ಬಂಟ್ವಾಳದ ಉದ್ಯಮಿಯೊಬ್ಬರು ಉದಾರತೆ ಮೆರೆದಿದ್ದಾರೆ.
ಲಾಕ್ಡೌನ್ ಹಿನ್ನೆಲೆ ಬ್ರಾಹ್ಮಣರ ನೆರವಿಗೆ ಬಂದ ಬಂಟ್ವಾಳದ ಉದ್ಯಮಿ - Lockdown effect
ಕೆಲಸವಿಲ್ಲದೆ ತೊಂದರೆ ಅನುಭವಿಸುತ್ತಿರುವ ಬ್ರಾಹ್ಮಣ ಸಮುದಾಯದ ಅಡುಗೆ ಸಹಾಯಕರು, ಅರ್ಚಕ ಸಹಾಯಕರಿಗೆ ಉದ್ಯಮಿಯೊಬ್ಬರು ನೆರವಾಗಿದ್ದಾರೆ.
ಬಂಟ್ವಾಳದ ಉದ್ಯಮಿ
ಬಂಟ್ವಾಳ ತಾಲೂಕಿನ ಶಂಭೂರು ಸಮೀಪ ಎರಕಳ ಮೂಲದ ಉದ್ಯಮಿ ಎರಕಳ ರಘುನಾಥ ಸೋಮಯಾಜಿ 100 ಜನರ ಅಕೌಂಟ್ಗೆ ತಲಾ 5 ಸಾವಿರ ರೂಪಾಯಿ ಹಾಕಿದ್ದಾರೆ. ಲಾಕ್ಡೌನ್ ಅವಧಿಯಲ್ಲಿ ಬ್ರಾಹ್ಮಣ ಸಮುದಾಯದ ಅರ್ಚಕರ ಸಹಾಯಕರು, ಅಡುಗೆ ಸಹಾಯಕರು, ಅಡುಗೆಯವರ ಜೀವನಕ್ಕೆ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ಈ ನಿರ್ಧಾರ ಕೈಗೊಂಡಿರುವುದಾಗಿ ತಿಳಿಸಿದ್ದಾರೆ.