ಪುತ್ತೂರು: ತಾಲೂಕಿನ ಈಶ್ವರಮಂಗಲ ಸಮೀಪದ ಸಾಂತ್ಯ ಎಂಬಲ್ಲಿ ಕೆ.ಎಸ್.ಆರ್.ಟಿ.ಸಿ ಬಸ್ ಪಲ್ಟಿಯಾಗಿ ಮನೆಯೊಂದರ ಅಂಗಳಕ್ಕೆ ಬಿದ್ದಿದೆ.
ಚಾಲಕನ ನಿಯಂತ್ರಣ ತಪ್ಪಿ 25 ಅಡಿ ಆಳಕ್ಕೆ ಬಿದ್ದ ಬಸ್: ಪುತ್ತೂರು ಬಳಿ ಅವಘಡ - ಪುತ್ತೂರು ಲೆಟೆಸ್ಟ್ ನ್ಯೂಸ್
ಪುತ್ತೂರಿನಿಂದ ಈಶ್ವರಮಂಗಲ ಕಡೆ ಹೋಗುತ್ತಿದ್ದ ಕೆ ಎಸ್ ಆರ್ ಟಿಸಿ ಬಸ್, ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಸುಮಾರು 25 ಅಡಿ ಆಳದಲ್ಲಿ ಇದ್ದ ಮನೆಯೊಂದರ ಅಂಗಳಕ್ಕೆ ಬಂದು ಬಿದ್ದಿದೆ.
Bus overturned
ಪುತ್ತೂರಿನಿಂದ ಈಶ್ವರಮಂಗಲ ಕಡೆ ಹೋಗುತ್ತಿದ್ದ ಕೆ ಎಸ್ ಆರ್ ಟಿಸಿ ಬಸ್, ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಬಸ್ ರಸ್ತೆಯಿಂದ ಧರೆಗುರುಳಿ, ಬಳಿಕ ಸುಮಾರು 25 ಅಡಿ ಆಳದಲ್ಲಿರುವ ಮನೆಯೊಂದರ ಅಂಗಳಕ್ಕೆ ಬಂದು ಬಿದ್ದಿದೆ.
ಬಸ್ಸಿನಲ್ಲಿ ಸುಮಾರು 21 ಜನ ಪ್ರಯಾಣಿಕರಿದ್ದು, ಅದೃಷ್ಟವಶಾತ್ ಯಾವುದೇ ಅಪಾಯ ಸಂಭವಿಸಿಲ್ಲ. ಆದರೆ ಬಸ್ ಚಾಲಕ ಹಾಗೂ ನಿರ್ವಾಹಕನಿಗೆ ಸಣ್ಣ-ಪುಟ್ಟ ಗಾಯಗಳಾಗಿವೆ.