ಮಂಗಳೂರು :ಗುಟ್ಕಾ ತಿಂದು ಬಸ್ ಚಾಲನೆ ಮಾಡುತ್ತಿದ್ದ ಇಬ್ಬರು ಚಾಲಕರಿಗೆ ಮಂಗಳೂರಿನ ಆರ್‌ಟಿಒ ಅಧಿಕಾರಿಗಳು ದಂಡ ವಿಧಿಸಿದ್ದಾರೆ. ಆರ್‌ಟಿಒ ಅಧಿಕಾರಿಗಳು ನಗರದ ಬಿಜೈ ಬಳಿ ಬಸ್ ದಾಖಲೆಗಳನ್ನು ತಪಾಸಣೆ ನಡೆಸುತ್ತಿದ್ದಾಗ, ಚಾಲಕರು ಗುಟ್ಕಾ ಜಗಿಯುತ್ತಾ ಅಧಿಕಾರಿಗಳ ಮುಂದೆ ಬಂದಿದ್ದಾರೆ. ಇದನ್ನು ಗಮನಿಸಿದ ಆರ್‌ಟಿಒ ಅಧಿಕಾರಿಗಳು ಇಬ್ಬರೂ ಬಸ್ ಚಾಲಕರಿಗೆ ತಲಾ 5 ಸಾವಿರ ರೂ. ದಂಡ ವಿಧಿಸಿದ್ದಾರೆ.
ಮಂಗಳೂರಿನಲ್ಲಿ ಗುಟ್ಕಾ ಜಗಿಯುತ್ತಾ ಬಸ್ ಚಾಲನೆ : ಇಬ್ಬರು ಚಾಲಕರಿಗೆ ತಲಾ 5000 ರೂ. ದಂಡ - ಗುಟ್ಕಾ ತಿನ್ನುತ್ತಾ ಬಸ್ ಚಾಲನೆ ಮಾಡುತ್ತಿದ್ದ ಇಬ್ಬರು ಚಾಲಕರು
ಗುಟ್ಕಾ ತಿನ್ನುತ್ತಾ ಬಸ್ ಚಾಲನೆ ಮಾಡುತ್ತಿದ್ದ ಇಬ್ಬರು ಚಾಲಕರಿಗೆ ಆರ್‌ಟಿಒ ಅಧಿಕಾರಿಗಳು 5000 ರೂ. ದಂಡ ವಿಧಿಸಿದ್ದಾರೆ. ಈ ಘಟನೆ ಮಂಗಳೂರಿನ ಬಿಜೈ ಬಳಿ ಬಸ್ ದಾಖಲೆಗಳನ್ನು ತಪಾಸಣೆ ನಡೆಸುತ್ತಿದ್ದಾಗ ನಡೆದಿದೆ..
ಮಂಗಳೂರು
ಉತ್ತರ ಕರ್ನಾಟಕಕ್ಕೆ ಹೋಗುತ್ತಿದ್ದ ಖಾಸಗಿ ಬಸ್ನ ಇಬ್ಬರು ಚಾಲಕರು ಗುಟ್ಕಾ ಜಗಿಯುತ್ತಾ ಪ್ರಯಾಣಿಸುತ್ತಿದ್ದರು ಎಂಬುದು ದಾಖಲೆ ಪರಿಶೀಲನೆ ವೇಳೆ ಗಮನಕ್ಕೆ ಬಂದಿದೆ. ಮದ್ಯ ಸೇವನೆ ಮಾತ್ರವಲ್ಲದೆ ಯಾವುದೇ ರೀತಿಯ ಅಮಲು ಪದಾರ್ಥ ಸೇವಿಸಿ ವಾಹನ ಚಲಾಯಿಸುವಂತಿಲ್ಲ. ಹಾಗಾಗಿ, ಪ್ರಕರಣ ದಾಖಲಿಸಲು ಅವಕಾಶವಿದ್ದು, ಅದರಂತೆ ದಂಡ ವಿಧಿಸಲಾಗಿದೆ ಎಂದು ಮಂಗಳೂರು ಆರ್‌ಟಿಒ ಅಧಿಕಾರಿ ಆರ್ ಎಂ ವರ್ಣೇಕರ್ ತಿಳಿಸಿದ್ದಾರೆ.
ಇದನ್ನೂ ಓದಿ:ತಬ್ಬಲಿ - ಮಾನಸಿಕ ಅಸ್ವಸ್ಥ ಯುವತಿ ಮೇಲೆ ದೊಡ್ಡಪ್ಪ, ಪೊಲೀಸ್ ಪೇದೆಯಿಂದ ರೇಪ್: ಈಗ ತುಂಬು ಗರ್ಭಿಣಿ!